ಎರ್ನಾಕುಳಂ: ಎರಡು ದಿನಗಳ ಭೇಟಿಗೆ ಪರಧಾನಿ ನರೇಂದ್ರ ಮೋದಿ ನಿನ್ನೆ ಸಂಜೆ ಕೊಚ್ಚಿಗೆ ಬಂದಿಳಿದರು. ನೆಡುಂಬಶ್ಶೇರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಅವರನ್ನು ಹೃದ್ಯವಾಗಿ ಸ್ವಾಗತಿಸಲಾಯಿತು.
ನಂತರ ಹೆಲಿಕಾಪ್ಟರ್ ಮೂಲಕ ಕೊಚ್ಚಿಯಲ್ಲಿರುವ ದಕ್ಷಿಣ ನೌಕಾದಳದ ಪ್ರಧಾನ ಕಚೇರಿಗೆ ಆಗಮಿಸಿದ ಪ್ರಧಾನಿ ಅವರನ್ನು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಬರಮಾಡಿಕೊಂಡರು. ಪ್ರಧಾನಿಯವರನ್ನು ಬರಮಾಡಿಕೊಳ್ಳಲು ನಗರದಲ್ಲಿ ಅನೇಕರು ಜಮಾಯಿಸಿದ್ದರು.
ಪ್ರಧಾನಿಯವರ ರೋಡ್ ಶೋ 7:30 ಕ್ಕೆ ಪ್ರಾರಂಭವಾಯಿತು. ಕೆಪಿಸಿಸಿ ಜಂಕ್ಷನ್ ನಿಂದ ಆಸ್ಪತ್ರೆ ಜಂಕ್ಷನ್ ವರೆಗೆ ರೋಡ್ ಶೋ ನಡೆಯಿತು. ಎರ್ನಾಕುಳಂ ಅತಿಥಿ ಗೃಹದಲ್ಲಿ ಪ್ರಧಾನ ಮಂತ್ರಿ ವಿಶ್ರಮಿಸಿದ್ದರು. ಸುರೇಶ್ ಗೋಪಿಯವರ ಪುತ್ರಿಯ ವಿವಾಹಕ್ಕಾಗಿ ಇಂದು ಬೆಳಗ್ಗೆ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ನಂತರ ತ್ರಿಪ್ರಯಾರ್ ಶ್ರೀರಾಮ ದೇವಸ್ಥಾನಕ್ಕೆ ಭೇಟಿ ನೀಡಿ ಮಧ್ಯಾಹ್ನ ಕೊಚ್ಚಿಗೆ ಹಿಂತಿರುಗಲಿದ್ದಾರೆ.
ಎರಡು ದಿನಗಳ ಭೇಟಿಗಾಗಿ ಕೇರಳಕ್ಕೆ ಆಗಮಿಸಿದ ಪ್ರಧಾನಿ, 4,006 ಕೋಟಿ ರೂ.ಗಳ ಮೂರು ಮಹತ್ವದ ಯೋಜನೆಗಳನ್ನು ದೇಶಕ್ಕೆ ಅರ್ಪಿಸಲಿದ್ದಾರೆ. ಕೊಚ್ಚಿಯಲ್ಲಿ ಕೊಚ್ಚಿನ್ ಶಿಪ್‍ಯಾರ್ಡ್, ಅಂತಾರಾಷ್ಟ್ರೀಯ ಹಡಗು ದುರಸ್ತಿ ಕೇಂದ್ರ ಮತ್ತು ಇಂಡಿಯನ್ ಆಯಿಲ್ ಕಾಪೆರ್Çರೇಷನ್‍ನ ಆಮದು ಟರ್ಮಿನಲ್‍ನಲ್ಲಿ ಡ್ರೈ ಡಾಕ್ ಅನ್ನು ಪ್ರಧಾನಿ ಇಂದು ಉದ್ಘಾಟಿಸುವರು.