ತ್ರಿಶೂರ್: ಖ್ಯಾತ ಜಾದೂಗಾರ ಗೋಪಿನಾಥ್ ಮುತ್ತುಕಾಡ್ ಹಾಗೂ ಮ್ಯಾಜಿಕ್ ಪ್ಲಾನೆಟ್ ಮತ್ತು ಡಿಎಸಿ ಸಂಸ್ಥೆಗಳ ಆಡಳಿತ ಮಂಡಳಿ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿದೆ.
ಮಾಜಿ ನೌಕರ ಮತ್ತು ಆತನ ಪೋಷಕರ ಹೇಳಿಕೆಗಳ ಆಧಾರದ ಮೇಲೆ, ತ್ರಿಶೂರ್ ಮೂಲದ ಮತ್ತು ಸಾರ್ವಜನಿಕ ಕಾರ್ಯಕರ್ತ, ಕರುವನ್ನೂರ್ ಕರಿಪಾಕುಲಂ ಮನೆಯ ಕೆ.ಕೆ. ಶಿಹಾಬ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಆಯೋಗ ಆದೇಶಿಸಿದೆ.
2017 ರಿಂದ ಮುತ್ತುಕಾಡ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಲಪ್ಪುರಂ ಮೂಲದ ಮತ್ತು ಅಂಗವಿಕಲರಾದ ಸಿ.ಪಿ.ಶಿಹಾಬ್ ಪತ್ರಿಕಾಗೋಷ್ಠಿಯಲ್ಲಿ ಮುತ್ತುಕಾಡ್ ವಿರುದ್ದ ಆರೋಪಿಸಿದ್ದರು. ಇದಾದ ನಂತರ ಹಲವು ಪೋಷಕರೂ ಮುಂದೆ ಬಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಕಲಚೇತನ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಆಯೋಗದ ಮೊರೆ ಹೋಗಲಾಗಿತ್ತು.