ಪೆರ್ಲ: ಪೆರ್ಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಹಾಸಭೆಯು ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಜರುಗಿತು. ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಧಾರ್ಮಿಕ ಮುಂದಾಳು, ಮಲ್ಲ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೊಡುಗೈದಾನಿ ಆನೆಮಜಲು ವಿಷ್ಣು ಭಟ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭ 52ನೇ ವರ್ಷದ ಶ್ರೀ ಗಣೇಶೋತ್ಸವದ ಲೆಕ್ಕಪತ್ರ ಮಂಡಿಸಲಾಯಿತು. ಅಯೋಧ್ಯೆಯಲ್ಲಿ ಜ. 22ರಂದು ನಡೆಯಲಿರುವ ಪ್ರಾಣಪ್ರತಿಷ್ಠೆ ಸಂದರ್ಭ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪೆರ್ಲ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಪೆರ್ಲ ಇದರ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭ 53ನೇ ವರ್ಷದ ಪೆರ್ಲ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಸಮಿತಿ ರಚಿಸಲಾಯಿತು. ಉದಯ ಚೆಟ್ಟಿಯಾರ್ ಅಧ್ಯಕ್ಷ, ಬಾಲಣ್ಣ ದ್ವಾರಕಾ ಪೆರ್ಲ, ಸತೀಶ್ ನಲ್ಕ ಉಪಾಧ್ಯಕ್ಷರು, ಸುಜಿತ್ ರೈ ಬಜಕೂಡ್ಲು ಪ್ರಧಾನ ಕಾರ್ಯದರ್ಶಿ, ಮೋಹನ ಕೋಟೆ, ಮೋಹನ ಪೆರ್ಲ ಕಾರ್ಯದರ್ಶಿಗಳು ಹಾಗೂ ಅಜಯ್ ಪೈ ಅಮೆಕ್ಕಳ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.