ಮುಳ್ಳೇರಿಯ: ಮುಳಿಯಾರಿನ ಗೋಳಿಯಡ್ಕ ಶ್ರೀ ವೆಂಕಟ್ರಮಣ ಆದಿಭೈರವ ಅಮ್ಮನವರ್ ಕ್ಷೇತ್ರ ನವೀಕರಣ ಪ್ರತಿಷ್ಠಾ ಮಹೋತ್ಸವವು ಏಪ್ರಿಲ್ 26 ರಿಂದ ಒಂದು ವಾರ ಜರಗಲಿದ್ದು ಸಮಾರಂಭವನ್ನು ಯಶಸ್ವಿಯಾಗಿ ಆಚರಿಸಲು ಬ್ರಹ್ಮಕಲಶೋತ್ಸವ ಸಮಿತಿ ಸಭೆಯು ಶ್ರೀ ಕ್ಷೇತ್ರ ಸನ್ನಿಧಿಯಲ್ಲಿ ಜರಗಿತು.
ಸಮಿತಿ ಉಪಾಧ್ಯಕ್ಷ ಮಧುಸೂಧನ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಪುನರ್ನಿರ್ಮಾಣ ಸಮಿತಿ ಅಧ್ಯಕ್ಷ ವಾಮನ ಆಚಾರ್ಯ ಬೋವಿಕ್ಕಾನ ಬ್ರಹ್ಮಕಲಶದ ಬಗ್ಗೆ ರೂಪುರೇμÉಗಳನ್ನು ನೀಡಿದರು. ಉಪ ಸಮಿತಿಗಳು ಹೇಗೆ ಕಾರ್ಯಾಚರಿಸಬೇಕೆಂಬುದರ ಬಗ್ಗೆ ಗೋವಿಂದ ಬಳ್ಳಮೂಲೆ ವಿವರಣೆಗಳನ್ನಿತ್ತರು.
ಸಭೆಯಲ್ಲಿ ಅಪ್ಪುಟ್ಟ ಅಮ್ಮಂಗೋಡ್, ಕೃಷ್ಣ ಅಮ್ಮಂಗೋಡ್, ಅಜಿತ್, ಶಶಿ ಹಾಗೂ ಪದಾಧಿಕಾರಿಗಳು, ಸದಸ್ಯರು, ಮಹಿಳಾಸಮಿತಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡರು. ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಗೋಳಿಯಡ್ಕ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸುಂದರ ವಂದಿಸಿದರು.