ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್ ಅವರು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವುದರೊಂದಿಗೆ ಭಾರತ ಮತ್ತು ಫ್ರಾನ್ಸ್ ನಡುವಿನ ಬೃಹತ್ ರಕ್ಷಣಾ ಒಪ್ಪಂದಗಳಿಗೂ ವೇಗ ಸಿಗುವ ನಿರೀಕ್ಷೆಗಳಿವೆ.
ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್ ಅವರು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವುದರೊಂದಿಗೆ ಭಾರತ ಮತ್ತು ಫ್ರಾನ್ಸ್ ನಡುವಿನ ಬೃಹತ್ ರಕ್ಷಣಾ ಒಪ್ಪಂದಗಳಿಗೂ ವೇಗ ಸಿಗುವ ನಿರೀಕ್ಷೆಗಳಿವೆ.
26 ರಫೇಲ್ ಯುದ್ಧ ವಿಮಾನ ಖರೀದಿ ಮತ್ತು ಫ್ರಾನ್ಸ್‌ನ ತಂತ್ರಜ್ಞಾನ ಹಂಚಿಕೆಯೊಂದಿಗೆ ಭಾರತದಲ್ಲಿ ನಿರ್ಮಾಣವಾಗಲಿರುವ ಮೂರು ಜಲಾಂತರ್ಗಾಮಿ ಯೋಜನೆಗಳು ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ರಕ್ಷಣಾ ಉದ್ಯಮದಲ್ಲಿ ಪರಸ್ಪರ ಸಹಕಾರದ ಉದ್ದೇಶವನ್ನು ಭಾರತ ಮತ್ತು ಫ್ರಾನ್ಸ್ ಹೊಂದಿವೆ. ಸುಧಾರಿತ ತಂತ್ರಜ್ಞಾನಗಳು ಮತ್ತು ವಿನ್ಯಾಸ, ಅಭಿವೃದ್ಧಿ, ಪರೀಕ್ಷೆ ಮತ್ತು ಉತ್ಪಾದನೆಯಲ್ಲಿ ಪಾಲುದಾರಿಕೆಯ ಮೂಲಕ ಅದನ್ನು ಸಾಧಿಸಲು ಎರಡೂ ದೇಶಗಳು ಉತ್ಸುಕವಾಗಿವೆ. ಫ್ರಾನ್ಸ್‌ನಿಂದ ಪಡೆದುಕೊಳ್ಳಲಾದ ತಂತ್ರಜ್ಞಾನದೊಂದಿಗೆ ಮಿಲಿಟರಿ ಯಂತ್ರಾಂಶದ ಜಂಟಿ ಉತ್ಪಾದನೆಯನ್ನು ವಿಸ್ತರಿಸಲು ಆಸಕ್ತಿ ಹೊಂದಿವೆ.
ಜ. 26ರ 75ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಬರಲಿರುವ ಇಮ್ಯಾನುಯಲ್ ಮ್ಯಾಕ್ರಾನ್ ಅವರು ಸೇನಾ ಪಥಸಂಚಲನದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ.