ವಾರಾಣಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) ನಡೆಸಿರುವ ವೈಜ್ಞಾನಿಕ ಸರ್ವೆಯ ವರದಿಯನ್ನು ಯಾವಾಗ ಬಹಿರಂಗ ಪಡಿಸಬೇಕು ಎಂಬುದನ್ನು ವಾರಾಣಸಿ ನ್ಯಾಯಾಲಯ ಶುಕ್ರವಾರ (ಜನವರಿ 5ರಂದು) ಪ್ರಕಟಿಸಲಿದೆ.
ವಾರಾಣಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) ನಡೆಸಿರುವ ವೈಜ್ಞಾನಿಕ ಸರ್ವೆಯ ವರದಿಯನ್ನು ಯಾವಾಗ ಬಹಿರಂಗ ಪಡಿಸಬೇಕು ಎಂಬುದನ್ನು ವಾರಾಣಸಿ ನ್ಯಾಯಾಲಯ ಶುಕ್ರವಾರ (ಜನವರಿ 5ರಂದು) ಪ್ರಕಟಿಸಲಿದೆ.
ಸರ್ವೆ ವರದಿಯನ್ನು ಕಳೆದು ತಿಂಗಳು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಎಎಸ್‌ಐ, ಕನಿಷ್ಠ ನಾಲ್ಕು ವಾರಗಳ ಕಾಲ ಬಹಿರಂಗಪಡಿಸಬಾರದು ಎಂದು ಮನವಿ ಮಾಡಿತ್ತು.ಆದರೆ, ಕಾರಣವನ್ನು ಸ್ಪಷ್ಟವಾಗಿ ಹೇಳಿರಲಿಲ್ಲ.
ಮೊಘಲ್ ದೊರೆ ಔರಂಗಜೇಬ್ 17ನೇ ಶತಮಾನದಲ್ಲಿ ದೇವಸ್ಥಾನದ ಒಂದು ಭಾಗವನ್ನು ಧ್ವಂಸಗೊಳಿಸಿದ್ದ. ಬಳಿಕ ಅಲ್ಲಿ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಔರಂಗಜೇಬ್‌ನ ಆಡಳಿತ ಅವಧಿಗಿಂತ ಮೊದಲೂ ಅಲ್ಲಿ ಮಸೀದಿ ಇತ್ತು ಎಂಬುದಾಗಿ ಮುಸ್ಲಿಂ ಪ್ರತಿವಾದಿಗಳ ಪ್ರತಿಪಾದಿಸಿದ್ದರು. ಹೀಗಾಗಿ, ನ್ಯಾಯಾಲಯವು ವೈಜ್ಞಾನಿಕ ಸರ್ವೆಗೆ ಆದೇಶಿಸಿತ್ತು.