ಮಲಪ್ಪುರಂ: ಸಾರ್ವಜನಿಕ ಆಸ್ತಿ ನಾಶ ಪ್ರಕರಣದಲ್ಲಿ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವ ಮುಹಮ್ಮದ್ ರಿಯಾಝ್ ಗೆ ಜಾಮೀನು ನೀಡಲಾಗಿದೆ. 2018 ರಲ್ಲಿ ಮಲಪ್ಪುರಂನಲ್ಲಿ ನಡೆದ ಡಿವೈಎಫ್‍ಐ ಮೆರವಣಿಗೆಯ ನಂತರದ ಪ್ರಕರಣದಲ್ಲಿ ಸಚಿವರ ವಿರುದ್ಧ ವಾರೆಂಟ್ ಆಗಿತ್ತು.
ಸಚಿವರು ಇಂದು ಮಲಪ್ಪುರಂ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ನಂತರ ಜಾಮೀನು ತೆಗೆದುಕೊಳ್ಳಲಾಯಿತು.
ಡಿವೈಎಫ್‍ಐ ನಡೆಸಿದ ಮೆರವಣಿಗೆ ವೇಳೆ ಕೆಎಸ್‍ಆರ್‍ಟಿಸಿ ಬಸ್‍ನ ಗಾಜು ಒಡೆದಿರುವ ಪ್ರಕರಣ ಇದಾಗಿದೆ. ಹತ್ತು ಆರೋಪಿಗಳಿರುವ ಪ್ರಕರಣದಲ್ಲಿ ಮಹಮ್ಮದ್ ರಿಯಾಜ್ ಏಳನೇ ಆರೋಪಿಯಾಗಿದ್ದಾರೆ.