ಮುಂಬೈ: ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ದಶಕಗಳಿಂದ ನಡೆಯುತ್ತಿರುವ ಸಂಘರ್ಷ ಶಮನಕ್ಕೆ 'ದ್ವಿ- ರಾಷ್ಟ್ರ ಪರಿಹಾರ'ವೇ ಸೂಕ್ತ ಎಂಬ ನಿಲುವನ್ನು ಭಾರತ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಂಗಳವಾರ ಹೇಳಿದ್ದಾರೆ.
ಮುಂಬೈ: ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ದಶಕಗಳಿಂದ ನಡೆಯುತ್ತಿರುವ ಸಂಘರ್ಷ ಶಮನಕ್ಕೆ 'ದ್ವಿ- ರಾಷ್ಟ್ರ ಪರಿಹಾರ'ವೇ ಸೂಕ್ತ ಎಂಬ ನಿಲುವನ್ನು ಭಾರತ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಂಗಳವಾರ ಹೇಳಿದ್ದಾರೆ.
ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ಅವರು ಮಾತನಾಡಿದದರು.
'ಕಳೆದ ವರ್ಷದ ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ನಡೆದದ್ದು ಭಯೋತ್ಪಾದಕ ದಾಳಿ ಆಗಿದೆ. ಭಯೋತ್ಪಾದನೆ ದಾಳಿಯ ನೋವನ್ನು ಹಲವು ಬಾರಿ ಅನುಭವಿಸಿರುವ ನಾವು, ಅದನ್ನು ಗುರುತಿಸುವುದು ಮುಖ್ಯ. ಹೀಗಾಗಿಯೇ ಭಯೋತ್ಪಾದನೆಯ ಮತ್ತೊಂದು ಬಲಿಪಶು ದೇಶದ (ಇಸ್ರೇಲ್) ಜತೆ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದೇವೆ' ಎಂದರು.
'ಯಾವುದೇ ದೇಶವು ಅಂತರರಾಷ್ಟ್ರೀಯ ಕಾನೂನುಗಳನ್ನು ಗಮನದಲ್ಲಿ ಇಟ್ಟುಕೊಂಡು, ನಾಗರಿಕರ ಸಾವು-ನೋವುಗಳನ್ನು ತಪ್ಪಿಸಲು ಆದ್ಯತೆ ನೀಡಬೇಕು' ಎಂದು ಅವರು ಇಸ್ರೇಲ್ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧವು ನಾಗರಿಕರ ಮೇಲೆ ಪರಿಣಾಮ ಬೀರುತ್ತಿರುವ ಕಾರಣ, ಅದನ್ನು ಎದುರಿಸಲು 'ಸುಸ್ಥಿರ ಮಾನವೀಯ ಕಾರಿಡಾರ್'ನ ಅಗತ್ಯವಿದೆ ಎಂದು ಜೈಶಂಕರ್ ಅಭಿಪ್ರಾಯಪಟ್ಟರು.