ಮಂಜೇಶ್ವರ : ತೊಡುಪುಝ ನ್ಯೂಮನ್ ಕಾಲೇಜಿನ ಮಲಯಾಳಂ ಶಿಕ್ಷಕ ಟಿಜೆ ಜೋಸೆಫ್ ಅವರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ವನ್ನು ಕೇಂದ್ರೀಕರಿಸಿ ಎನ್ಐಎ ತನಿಖೆ ಆರಂಭಿಸಿದೆ. ಪ್ರಕರಣದ ಮೊದಲ ಆರೋಪಿ ಪಾಪುಲ್ಯರ ಫ್ರೆಂಟ್ ಕಾರ್ಯಕರ್ತನಾಗಿದ್ದ ಸವಾದ್ (27)ನ ವಿಚಾರಣೆಯಿಂದ ದೊರೆತ ಮಾಹಿತಿಯಂತೆ ತನಿಖೆ ನಡೆಸಲಾಗುತ್ತಿರುವುದಾಗಿ ತಿಳಿದು ಬಂದಿದೆ.
2010 ರ ಕೈ ಕತ್ತರಿಸಿದ ಪ್ರಕರಣದ ಆರೋಪಿ ಸವಾದ್ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸಂದರ್ಭದಲ್ಲಿ ಯಾರದ್ದಾದರೂ ಸಹಾಯವನ್ನು ಪಡೆದಿದ್ದನೇ ಎಂದು ತಿಳಿಯಲು ಕೊಚ್ಚಿ ಎನ್ಐಎ ಮಂಜೇಶ್ವರ ಕೇಂದ್ರೀಕರಿಸಿ ತನಿಖೆಯನ್ನು ಆರಂಭಿಸಿದೆ. ಆರೋಪಿ ಸವಾದ್ ನನ್ನು ಸೋಮವಾರ ಮಂಜೇಶ್ವರಕ್ಕೆ ಕರೆತಂದು ಸಾಕ್ಷ್ಯ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ವಾರಗಳ ಹಿಂದೆ ಎನ್‌ಐಎ ಕಣ್ಣೂರಿನ ಮಟ್ಟನ್ನೂರಿನಲ್ಲಿ ಸವಾದ್‌ನನ್ನು ಬಂಧಿಸಿತ್ತು.