ಕಾಸರಗೋಡು: ಸಮಾಜಿಕ ನವೋತ್ಥಾನದ ಹರಿಕಾರ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಯುವ ಕೇಂದ್ರವು ಕೇರಳ ರಾಜ್ಯ ಯುವ ಕಲ್ಯಾಣ ಮಂಡಳಿ ನೇತೃತ್ವದಲ್ಲಿ ಯುವ ದಿನಾಚರಣೆ ಹಾಗೂ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತ್ತು.
ಉದುಮ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಸಿ.ಎಚ್.ಕುಞಂಬು ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲ ಡಾ.ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಾ.ಟಿ.ವಿನಯನ್, ಪಿಟಿಎ ಕಾರ್ಯದರ್ಶಿ ಡಾ.ವಿನಯ್ ಜೋಸೆಫ್, ಐಕ್ಯೂಎಸಿ ಸಂಯೋಜಕ-ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಎಂ.ಸುಧಾಮೋಳ್, ಕಾಲೇಜು ಯೂನಿಯನ್ ಅಧ್ಯಕ್ಷ ಅನಂತು ಮೋಹನ್ ಉಪಸ್ಥಿತರಿದ್ದರು. ಜಿಲ್ಲಾ ಯುವ ಸಮನ್ವಯಾಧಿಕಾರಿ ಎ.ವಿ.ಶಿವಪ್ರಸಾದ್ ಸ್ವಾಗತಿಸಿದರು. ಜಿಲ್ಲಾ ಯುವ ಕಾರ್ಯಕ್ರಮಾಧಿಕಾರಿ ಪಿ.ಸಿ.ಶೀಲಾ ವಂದಿಸಿದರು. ನಂತರ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಖದೀಜತ್ ಕುಬ್ರಾ ಪ್ರಥಮ, ಎಂ.ಆರ್ಯ ದ್ವಿತೀಯ ಹಾಗೂ ಪಿ.ಅನನ್ಯ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.