ಕಾಸರಗೋಡು: 2022-23 ರ ಆರ್ಥಿಕ ವರ್ಷದಲ್ಲಿ ಉತ್ತಮ ಕಾರ್ಯಕ್ಷಮತೆ ಗುರುತಿಸಲು, ರಾಜ್ಯ, ಪ್ರದೇಶ ಮತ್ತು ಜಿಲ್ಲೆಯ ಆಧಾರದ ಮೇಲೆ ಸಾಮಾನ್ಯ, ಮಹಿಳೆಯರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವರ್ಗಗಳಿಗೆ ಸೇರಿದ ಹೈನುಗಾರರನ್ನು ಆಯ್ಕೆ ಮಾಡಲು ಹೈನುಗಾರರ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ 52 ಹೈನುಗಾರರಿಗೆ ಪ್ರಮಾಣ ಪತ್ರ ಮತ್ತು ನಗದು ಪುರಸ್ಕಾರ ನೀಡಲಾಗುವುದು.
ರಾಜ್ಯದ ಅತ್ಯುತ್ತಮ ಆಪ್ಕೋಸ್/ನಾನ್ ಆಪ್ಕೋಸ್ ಡೈರಿಗಳನ್ನು ಆಯ್ಕೆ ಮಾಡುವ ಡಾ.ವರ್ಗೀಸ್ ಕುರಿಯನ್ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಹೈನುಗಾರಿಕೆ ಸಹಕಾರಿ ಸಂಘಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಪುರಸ್ಕಾರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬ್ಲಾಕ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಹೈನುಗಾರಿಕೆ ಅಭಿವೃದ್ಧಿ ಘಟಕವನ್ನು ಸಂಪರ್ಕಿಸಬಹುದು. ಫೆಬ್ರವರಿ 16 ಮತ್ತು 17 ರಂದು ಇಡುಕ್ಕಿಯ ಅನಕಾರದಲ್ಲಿ ನಡೆಯುವ ರಾಜ್ಯ ಹೈನುಗಾರರ ಕೂಟ 'ಪದವ್ 2024' ವೇದಿಕೆಯಲ್ಲಿ ಆಯ್ಕೆಯಾದ ಹೈನುಗಾರರಿಗೆ ಪ್ರಶಸ್ತಿಯನ್ನು ವಿತರಿಸಲಾಗುವುದು.