ಕಾಸರಗೋಡು: ಗ್ರಾಹಕರ ಹಕ್ಕುಗಳ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ವಿತರಣಾ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು "ಈ ಒಳ್ಳೆಯ ಬದಲಾವಣೆಗಳನ್ನು ತಿಳಿದುಕೊಳ್ಳಿ" ಎಂಬ ಘೋಷಣೆಯೊಂದಿಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಕಾಞಂಗಾಡು ನಗರಸಭಾ ಸದಸ್ಯೆ ವಂದನಾ ಬಾಲರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ಶೈಕ್ಷಣಿಕ ಜಿಲ್ಲಾ ಶಿಕ್ಷಣಾಧಿಕಾರಿ ಟಿ.ಪಿ.ಬಾಲಾದೇವಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ವಕೀಲ ರಾಧಾಕೃಷ್ಣನ್ ಪೆರುಂಬಳ, ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಉಪಸ್ಥಿತರಿದ್ದರು. ಹಿರಿಯ ಅಧೀಕ್ಷಕ ಎಂ.ಜಯಪ್ರಕಾಶ್ ಸ್ವಾಗತಿಸಿದರು. ಹೊಸದುರ್ಗ ತಾಲೂಕು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಕೆ.ಎನ್.ಬಿಂದು ವಂದಿಸಿದರು.
ಗ್ರಾಹಕ ಸಂರಕ್ಷಣಾ ಕಾಯ್ದೆ ಮತ್ತು ಹಸಿರು ಬಳಕೆ ಕುರಿತು ತರಗತಿ ನಡೆಯಿತು. ವಿದ್ಯಾರ್ಥಿಗಳಿಗೆ ಇ-ಕಾಮರ್ಸ್‍ವ್ಯಾಪಾರ ಮತ್ತು ವಯೋಮಿತಿಯಲ್ಲಿ ಗ್ರಾಹಕರ ರಕ್ಷಣೆ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ಹಾಗೂ ಗ್ರಾಹಕ ಸಂರಕ್ಷಣಾ ಕಾಯ್ದೆ ಕುರಿತು ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು. ಪ್ರೌಢಶಾಲಾ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಎಂ.ದರ್ಶನ (ಲಿಟ್ಲ್ ಫ್ಲವರ್ ಹೈಸ್ಕೂಲ್ ಕಾಂಞಂಗಾಡ್) ಪ್ರಥಮ, ಶ್ರೇಯಾ ಎಸ್.ಬಾಬು (ಎಂ.ಪಿ.ಎಸ್. ಸರ್ಕಾರಿ ಎಚ್.ಎಸ್.ಎಸ್. ವೆಳ್ಳಿಕೋತ್) ದ್ವಿತೀಯ, ಟಿ.ವಿ.ಅಗ್ರಿಮಾ (ಉದಿನೂರು ಸರ್ಕಾರಿ ಎಚ್.ಎಸ್.ಎಸ್) ತೃತೀಯ ಸ್ಥಾನ ಪಡೆದುಕೊಂಡರು. ಯುಪಿ ವಿಭಾಗದಲ್ಲಿ ಹರಿಗೋವಿಂದ್ (ಎಯುಪಿ ಶಾಲೆ ಪಳ್ಳಿಕ್ಕರ) ಪ್ರಥಮ, ಆರ್.ದೀಕ್ಷಿತ (ಎಂಪಿಎಸ್ ಜಿವಿಎಚ್ ಎಸ್ ವೆಳ್ಳಿಕ್ಕೋತ್) ದ್ವಿತೀಯ ಹಾಗೂ ಆರ್.ಅಶ್ವಿನ್ ರಾಜ್ (ರಾಜಾಸ್ ಎಚ್ ಎಸ್)ತೃತೀಯ ಸ್ಥಾನ ಪಡೆದುಕೊಮಡರು. ಸುಭಾಷ್ ಚಂದ್ರ ಜಯನ್ ರಸಪ್ರಶ್ನೆ ಸ್ಪರ್ಧೆಯನ್ನು ನಿರ್ವಹಿಸಿದರು.