ನವದೆಹಲಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಅಧಿರ್ ರಂಜನ್ ಚೌಧರಿ ಅವರು, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಯಾನ್ ಅವರನ್ನು ವಿದೇಶಿಗ ಎಂದು ಟೀಕಿಸಿದ್ದಕ್ಕೆ ಶುಕ್ರವಾರ ಕ್ಷಮೆ ಕೋರಿದ್ದಾರೆ.
ನವದೆಹಲಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಅಧಿರ್ ರಂಜನ್ ಚೌಧರಿ ಅವರು, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಯಾನ್ ಅವರನ್ನು ವಿದೇಶಿಗ ಎಂದು ಟೀಕಿಸಿದ್ದಕ್ಕೆ ಶುಕ್ರವಾರ ಕ್ಷಮೆ ಕೋರಿದ್ದಾರೆ.
'ಅಜಾಗರೂಕತೆಯಿಂದಾಗಿ ಒಬ್ರಯಾನ್ ಅವರನ್ನು ವಿದೇಶಿಗ ಎಂದು ಕರೆದಿದ್ದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸಿದ್ದೇನೆ' ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ 'ಎಕ್ಸ್' ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ನಡುವೆ ಸೀಟು ಹಂಚಿಕೆ ಮಾತುಕತೆ ಸಾಧ್ಯವಾಗದಿರಲು ಮೂರು ಕಾರಣಗಳಿವೆ. ಅವುಗಳೆಂದರೆ, ಅಧಿರ್ ರಂಜನ್ ಚೌಧರಿ, ಅಧಿರ್ ರಂಜನ್ ಚೌಧರಿ ಮತ್ತು ಅಧಿರ್ ರಂಜನ್ ಚೌಧರಿ ಎಂದು ಡೆರೆಕ್ ಒಬ್ರಯಾನ್ ಹೇಳಿದ್ದರು.
ಈ ಕುರಿತು ಗುರುವಾರ ರಾತ್ರಿ ಸಿಲಿಗುರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಚೌಧರಿ ಅವರು, 'ವಿದೇಶಿಗರಾದ ಡೆರೆಕ್ ಒಬ್ರಯಾನ್ ಅವರಿಗೆ ಎಲ್ಲವೂ ಗೊತ್ತಿದೆ, ಅವರನ್ನೇ ಕೇಳಿ' ಎಂದು ಹೇಳಿದ್ದರು.