ಕಾಸರಗೋಡು: ನಗರಸಭಾ ಪ್ರಾಥಮಿಕ ಪ್ಯಾಲಿಯೇಟಿವ್ ಕೇರ್ ವತಿಯಿಂದ ಉಪಶಾಮಕ ಆರೈಕೆ ಸಪ್ತಾಹದ ಅಂಗವಾಗಿ ನಗರದಲ್ಲಿ ಸಂದೇಶ ಜಾಗೃತಿ ರ್ಯಾಲಿ ಆಯೋಜಿಸಲಾಯಿತು.
ನಗರಸಭೆ ಅಭಿವೃದ್ಧಿ ಸಮಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ಬಾಸ್ ಬೇಗಂ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ರಜಿನಿ, ನಗರಸಭೆ ಸದಸ್ಯರಾದ ಎಂ. ಸರಳ,ವಿಮಲಾ ಶ್ರೀದರ್, ಅಬ್ದುಲ್ ರಹಮಾನ್ ಚಕ್ಕರ, ಪ್ರಾಥಮಿಕ ಉಪಶಾಮಕ ನಿಗಾ ಶುಶ್ರೂಷಕಿ ಕೆ. ರಮಾ, ಆಶಾ ಕಾರ್ಯಕರ್ತೆಯರು, ಜಿಎಚ್‍ಎಸ್‍ಎಸ್ ಕಾಸರಗೋಡಿನ ಎಸ್‍ಪಿಸಿ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಉಪಶಾಮಕ ನಿಗಾ ಘಟಕದ ಸಂಚಾಲಕ ಸಿ. ಐ.ಎಫ್ ಬುಶ್ರಾ ನೇತೃತ್ವ ವಹಿಸಿದ್ದರು.