ಕಾಸರಗೋಡು: ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಶ್ರಯದಲ್ಲಿ ಜಿಲ್ಲೆಯ ಯುಪಿ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇ-ವಾಣಿಜ್ಯ ಮತ್ತು ಡಿಜಿಟಲ್ ವ್ಯವಹಾರದ ಯುಗದಲ್ಲಿ ಗ್ರಾಹಕರ ರಕ್ಷಣೆ ಕುರಿತು ಪ್ರಬಂಧ ಸ್ಪರ್ಧೆಯನ್ನು ನಡೆಸಲಾಯಿತು.
ಪ್ರಬಂಧ ಸ್ಪರ್ಧೆಯ ವಿಜೇತರು ಯುಪಿ ವಿಭಾಗದಲ್ಲಿ ಕಾಕತ್ ಸರ್ಕಾರಿ ಉನ್ನತ ಸೆಶಾಲೆಯ ಎಸ್.ಶ್ರೀನಂದ ಪ್ರಥಮ ಸ್ಥಾನ, ಹೊಸದುರ್ಗ ಲಿಟ್ಲ್ ಫ್ಲವರ್ ಪ್ರೌಢಶಾಲೆಯ ಕೆ.ಫಾತಿಮಾ ಜಿಯಾ ದ್ವಿತೀಯ ಹಾಗೂ ಕೊಳ್ಳಿಡುಕ್ಕಂ ಸರ್ಕಾರಿ ಯುಪಿ ಶಾಲೆಯ ಎಸ್.ಎನ್.ಶ್ರೀನಂದ ತೃತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಬಲ್ಲಾ ಸರ್ಕಾರಿ ಎಚ್‍ಎಸ್‍ಎಸ್‍ನ ಕೆ.ಮಂಜಿಮಾ ಪ್ರಥಮ, ಕುಟ್ಟಮತ್ ಸರ್ಕಾರಿ ಎಚ್‍ಎಸ್‍ಎಸ್‍ನ ಎಸ್.ಶ್ರುತಿ ದ್ವಿತೀಯ ಹಾಗೂ ಉಪ್ಪಿಲಕೈ ಪ್ರೌಢಶಾಲೆಯ ಎಂ.ವಿ.ರಾಗೇಂದು ತೃತೀಯ ಸ್ಥಾನ ಪಡೆದರು.