ಪಾಲಕ್ಕಾಡ್: ಲಂಚ ಪ್ರಕರಣದಲ್ಲಿ ಬಂಧಿತ ಭೂರೇಖಾ ತಹಸೀಲ್ದಾರ್ ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪಾಲಕ್ಕಾಡ್ ಭೂರೇಖಾ ತಹಸೀಲ್ದಾರ್ ಪಿ ಸುಧಾಕರನ್ ಅವರನ್ನು ಅಮಾನತು ಮಾಡಲಾಗಿದೆ. ಪಾಲಕ್ಕಾಡ್ ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸುಧಾಕರನ್ ನಗರದ ಮಾಲ್ ಮಾಲೀಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದರು. 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡುತ್ತಿದ್ದಾಗ ಜಾಗೃತ ದಳ ರೆಡ್‍ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದರು. ಸುಧಾಕರನ್ ಅವರು ಪಾಲಕ್ಕಾಡ್ ತಹಸೀಲ್ದಾರ್‍ನ ಹೆಚ್ಚುವರಿ ಪ್ರಭಾರ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು.
ಕಳೆದ ಶನಿವಾರ ಲಂಚ ಪಡೆಯುತ್ತಿದ್ದ ವೇಳೆ ವಿಜಿಲೆನ್ಸ್ ತಂಡ ಸುಧಾಕರನ್ ಅವರನ್ನು ಹಿಡಿದಿತ್ತು. ಅಧಿಕಾರಿ ವಿರುದ್ಧ ಸಾಕಷ್ಟು ದೂರುಗಳು ಬಂದಿವೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.