ನವದೆಹಲಿ: ಪಿಸಿ ಜಾರ್ಜ್ ಬಿಜೆಪಿಗೆ ಸೇರ್ಪಡೆಯಾದರು. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದ ಕಾರ್ಯಕ್ರಮದಲ್ಲಿ ಅವರು ಸದಸ್ಯತ್ವ ಸ್ವೀಕರಿಸಿದರು.
ಕೊಟ್ಟಾಯಂ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಪಿಸಿ ಜಾರ್ಜ್ ಅವರ ಪುತ್ರ ಅಡ್ವ. ಶಾನ್ ಜಾರ್ಜ್ ಮತ್ತು ಜನಪಕ್ಷ್ಷದ ಕಾರ್ಯದರ್ಶಿ ಜಾರ್ಜ್ ಜೋಸೆಫ್ ಬಿಜೆಪಿ ರಾಷ್ಟ್ರೀಯ ನಾಯಕರಿಂದ ಸದಸ್ಯತ್ವ ಸ್ವೀಕರಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನದಾಸ್ ಅಗರ್ವಾಲ್, ರಾಷ್ಟ್ರೀಯ ಕಾರ್ಯದರ್ಶಿ ಅನಿಲ್ ಕೆ. ಆಂಟನಿ, ಕೇರಳ ರಾಜ್ಯದ ಪ್ರಭಾÀರಿ ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವರಾದ ವಿ. ಮುರಳೀಧರನ್ ಮತ್ತು ರಾಜೀವ್ ಚಂದ್ರಶೇಖರ್ ಪಕ್ಷ ಪ್ರವೇಶದ ವೇಳೆ ಹಾಜರಿದ್ದರು. ಪಿಸಿ ಜಾರ್ಜ್ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ.
ಜನಪಕ್ಷಂ ಸೆಕ್ಯುಲರ್ ಪಕ್ಷದ ನಾಯಕ ಮತ್ತು ಪೂಂಜಾರ್ ಶಾಸಕ ಪಿಸಿ ಜಾರ್ಜ್ ನಿನ್ನೆ ಜೆಪಿಗೆ ಪ್ರವೇಶವನ್ನು ಘೋಷಿಸಿದ್ದರು. ಉತ್ತಮ ಕೆಲಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವುದರಲ್ಲಿ ಹೆಮ್ಮೆಯಿದೆ ಎಂದು ಪಿಸಿ ಜಾರ್ಜ್ ಅಭಿಪ್ರಾಯ ವ್ಯಕ್ತಪಡಿಸಿದರು. ತಾವು ಸೇರಿದಂತೆ ಜನಪಕ್ಷಂ ಸದಸ್ಯರು ಬಿಜೆಪಿಯೊಂದಿಗೆ ನಿಕಟವಾಗಿ ಕೆಲಸ ಮಾಡಲು ಬಯಸಿದ್ದೇವೆ. ಜನಪಕ್ಷಂನ ಎಲ್ಲ ಸದಸ್ಯರೂ ಸದಸ್ಯತ್ವ ಪಡೆದು ಅಧಿಕೃತ ಬಿಜೆಪಿ ಸದಸ್ಯರಾಗುವ ಆಸಕ್ತಿ ಹೊಂದಿದ್ದಾರೆ ಎಂದು ಪಿಸಿ ಜಾರ್ಜ್ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕೇಳಿದರೆ ಮಾತ್ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಪಕ್ಷ ಸೇರಿದ ನಂತರ ಪಕ್ಷವೇ ಅಭ್ಯರ್ಥಿಯನ್ನು ನಿರ್ಧರಿಸುವುದರಿಂದ ನಾಯಕರ ಸೂಚನೆಯಂತೆ ನಡೆಗಳು ಇರಲಿವೆ ಎಂದಿರುವರು. ಜನ ಪಕ್ಷಂ ಸದಸ್ಯರ ತ್ರಿಸದಸ್ಯ ಸಮಿತಿ ದೆಹಲಿ ತಲುಪಿ ಬಿಜೆಪಿಯ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಿತು. ಪಿಸಿ ಜಾರ್ಜ್, ಶಾನ್ ಜಾರ್ಜ್ ಮತ್ತು ಜಾರ್ಜ್ ಜೋಸೆಫ್ ಕೇಂದ್ರ ನಾಯಕರನ್ನು ಭೇಟಿ ಮಾಡಿದರು.