ತಿರುವನಂತಪುರಂ: ಶಬರಿಮಲೆ ವಿಚಾರದಲ್ಲಿ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ವಿಧಾನಸಭೆಯಲ್ಲಿ ಇಂದು ವ್ಯಾಪಕ ವಾಗ್ದಾಳಿ ನಡೆಸಿದರು. ನಕಲಿ ಭಕ್ತರಿಂದಾಗಿ ಸಮಸ್ಯೆ ಸೃಷ್ಟಿಯಾಗಿದ್ದು, ನಕಲಿ ಭಕ್ತರು ಶಬರಿಮಲೆ ಬೆಟ್ಟ ಏರದೆ ಪಂಬಾದಿಂದ ಮರಳಿದ್ದಾರೆ. ನಿಜವಾದ ಭಕ್ತರು ಹಾಗೆ ಮಾಡುವುದಿಲ್ಲ ಎಂದು ಸಚಿವರು ವಾದಿಸಿದರು.
ಶಬರಿಮಲೆಯನ್ನು ನಾಶಪಡಿಸುವ ಹುಸಿ ಪ್ರಚಾರ ನಡೆಯುತ್ತಿದೆ ಎಂದು ಸಚಿವರು ಕಿಡಿಕಾರಿದರು.
ಭಕ್ತರನ್ನು ಥಳಿಸಿರುವುದು ವಿಡಿಯೋದಲ್ಲಿದೆ. ಶಬರಿಮಲೆಯಲ್ಲಿ ನೂಕುನುಗ್ಗಲು ಉಂಟಾಗಿ ತಮಿಳುನಾಡಿನ ಬಾಲಕಿಯೊಬ್ಬಳು ಸಾವನ್ನಪ್ಪಿರುವುದು ಸೇರಿದಂತೆ ಆತಂಕ ಮೂಡಿಸುವ ಪ್ರಚಾರ ನಡೆದಿದೆ. ಪದೇ ಪದೇ ಅಯ್ಯಪ್ಪ ಭಕ್ತರನ್ನು ನಕಲಿ ಭಕ್ತರು ಎಂದು ಕರೆದಿರುವ ದೇವಸ್ವಂ ಸಚಿವರು, ಭಕ್ತರು ಉದ್ದೇಶಪೂರ್ವಕವಾಗಿ ತೊಂದರೆ ಸೃಷ್ಟಿಸಿದ್ದು, ಪೋಲೀಸರು ಅತ್ಯಂತ ನಿಖರವಾಗಿ ಮಧ್ಯಪ್ರವೇಶಿಸಿದ್ದಾರೆ ಎಂದು ವಾಗ್ದಾಳಿ ನಡೆಸಿ ಸಮರ್ಥಿಸಿದರು.