ಶಬರಿಮಲೆ: ಶಬರಿಮಲೆ ದೇಗುಲ ಹಾಗೂ ಆಚರಣೆಗಳನ್ನು ಅವಹೇಳನಗೈಯ್ಯುವ ಹೇಳಿಕೆಯೊಂದನ್ನು ಸ್ವತಃ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಆಡುವ ಮೂಲಕ ವಿವಾದಕ್ಕೆ ಎಡೆಮಾಡಿದ್ದಾರೆ. ಶಬರಿಮಲೆಯಲ್ಲಿ ಯಾವುದೇ ಆಚರಣೆಗೆ ಮಹತ್ವವಿಲ್ಲ ಎಂದ ಸಚಿವರು, ಯಾರು ಬೇಕಾದರೂ ಶಬರಿಮಲೆಗೆ ಭೇಟಿ ನೀಡಬಹುದು ಎಂಬ ಹೇಳಿಕೆ ನೀಡಿರುವರು.
ಗಾಯಕ ಪಿ.ಕೆ. ವೀರಮಣಿ ದಾಸನ್ ಅವರಿಗೆ ನಿನ್ನೆ ಹರಿವರಾಸನ ಪ್ರಶಸ್ತಿ ಪ್ರದಾನಗೈದು ಸಚಿವರು ಮಾತನಾಡುವಾದ ಈ ವಿವಾದಾತ್ಮಕ ಹೇಳಿಕೆ ನೀಡಿರುವರು.
ಕಪ್ಪು ಬಟ್ಟೆ ಧರಿಸುವ ಅಗತ್ಯವಿಲ್ಲ. ನೀವು ಯಾವುದೇ ಉಡುಪನ್ನು ಧರಿಸಬಹುದು. ಶಬರಿಮಲೆಗೆ ಮಾಲೆ ಹಾಕದೆ, ಉಪವಾಸ ಮಾಡದೆಯೂ ಭೇಟಿ ನೀಡಬಹುದು ಎಂದು ಸಚಿವರು ಹೇಳಿರುವರು. ಸರ್ಕಾರದ ನಿರ್ಲಕ್ಷ್ಯದಿಂದ ಶಬರಿಮಲೆ ಯಾತ್ರೆ ವಿಫಲವಾದ ಬೆನ್ನಿಗೇ ಸ್ವತಃ ದೇವಸ್ವಂ ಸಚಿವರೇ ವಿಧಿ-ವಿಧಾನ ಅವಹೇಳನಗೈವ ಹೇಳಿಕೆ ನೀಡಿರುವುದು ತೀವ್ರ ವಿವಾದವಾಗುವ ಸೂಚನೆಗಳಿವೆ.