ತಿರುವನಂತಪುರಂ: ರಾಜಭವನದ ಭದ್ರತೆಯನ್ನು ಸಿಆರ್‍ಪಿಎಫ್ ವಹಿಸಿಕೊಂಡಿದೆ. ಪಲ್ಲಿಪುರಂ ಸಿಆರ್‍ಪಿಎಫ್ ಶಿಬಿರದ 30 ಸದಸ್ಯರ ತಂಡ ರಾಜಭವನದ ಭದ್ರತೆಯನ್ನು ವಹಿಸಿಕೊಂಡಿದೆ.
ಸಿಆರ್‍ಪಿಎಫ್ ಸಿಬ್ಬಂದಿಯೊಂದಿಗೆ ಕೇರಳ ಪೋಲೀಸರು ಮುಖ್ಯ ದ್ವಾರದ ಮುಂದೆ ನಿಂತಿದ್ದಾರೆ. ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರಿಗೆ ಇಂದು ಮಧ್ಯಾಹ್ನ ಗೃಹ ಸಚಿವಾಲಯವು Z ಪ್ಲಸ್ ಭದ್ರತೆಯನ್ನು ನೀಡಿದೆ.
ರಾಜ್ಯಪಾಲರ ವಿರುದ್ಧ ನಿರಂತರ ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜಭವನ ಹಾಗೂ ರಾಜ್ಯಪಾಲರ ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಸಿಆರ್‍ಪಿಎಫ್ ಭದ್ರತೆಯನ್ನು ವಹಿಸಿಕೊಂಡ ನಂತರ, ಅಸ್ತಿತ್ವದಲ್ಲಿರುವ ಭದ್ರತಾ ಪ್ರೊಟೋಕಾಲ್‍ಗಳಲ್ಲಿ ಬದಲಾವಣೆಗಳಾಗುತ್ತಿವೆ.
ಕೊಲ್ಲಂ ಮೈದಾನದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮೇಲೆ ಎಸ್‍ಎಫ್‍ಐ ಗೂಂಡಾಗಳು ಹಿಂಸಾಚಾರ ನಡೆಸಲೆತ್ನಿಸಿದ ಘಟನೆ ಇಂದು ನಡೆದಿತ್ತು. ನಂತರ ರಾಜ್ಯಪಾಲರು ತನಗೆ ಜೀವ ಬೆದರಿಕೆ ಇದೆ ಎಂದು ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದರು. ಇದರ ಬೆನ್ನಲ್ಲೇ ಸಿಆರ್‍ಪಿಎಫ್ ಭದ್ರತೆಯನ್ನು ವಹಿಸಿಕೊಂಡಿದೆ.