ಬದಿಯಡ್ಕ: ಎಡನೀರು ಸಮೀಪದ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಸಭೆಯು ಕ್ಷೇತ್ರ ಪರಿಸರದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ನವೀನ್ ಕುಮಾರ್ ಭಟ್ ಕುಂಜರಕಾನ ವಹಿಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು.
ಜೀರ್ಣೋದ್ಧಾರ ನಿಧಿ ಕೂಪನ್ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇತ್ತೀಚೆಗೆ ನಿಧನರಾದ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಷ್ಣು ಭಟ್ ಆನೆಮಜಲು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಷ್ಣು ಭಟ್ ಅನೇಕ ಕ್ಷೇತ್ರಗಳ, ಸಂಘ, ಸಂಸ್ಥೆಗಳ ಅಭಿವೃದ್ಧಿ ಕಾರ್ಯದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದವರು. ಮಲ್ಲ ಕ್ಷೇತ್ರದ ಇಂದಿನ ಬೆಳವಣಿಗೆಯ ರೂವಾರಿ. ಸರಳ ಸ್ವಭಾವದ , ಸಜ್ಜನಿಕೆಯ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಶ್ರೀ ಮಹಾವಿಷ್ಣು ದೇವರಲ್ಲಿ ಪ್ರಾರ್ಥಿಸಲಾಯಿತು.
ಸಮಿತಿಯ ಕಾರ್ಯದರ್ಶಿ ಕೆ.ಯಂ. ಶರ್ಮಾ ಎಡನೀರು ಆರಂಭದಲ್ಲಿ ಸ್ವಾಗತಿಸಿ, ಹಾಗೂ ಕೂಪನ್ ಸಂಬಂಧಿಸಿದ ವಿಷಯಗಳನ್ನು ಹಾಗೂ ಲೆಕ್ಕಪತ್ರ ವಿವರಗಳನ್ನು ನೀಡಿದರು. ಗೋವಿಂದ ಭಟ್.ಕೆ. ಅವರು ಜೀರ್ಣೋದ್ಧಾರ ಬಗ್ಗೆ ಎಲ್ಲಾ ಭಕ್ತರ ಸಹಾಯ ಸಹಕಾರ ಅಗತ್ಯ.ಎಂದು ಹೇಳಿದರು. ಜ. 18 ರಿಂದ 22.ರ ತನಕ ಕ್ಷೇತ್ರ ಸನ್ನಿಧಿಯಲ್ಲ್ಲಿ ನಡೆಯಲಿರುವ ರಾಮಾಯಣ ಪಾರಾಯಣ, ಪ್ರವಚನ ಕಾರ್ಯಕ್ರಮ ವಿವರಗಳನ್ನು ತಿಳಿಸಲಾಯಿತು. ವಾಮನ ಆಚಾರ್ಯ, ವಾಸುದೇವ ಭಟ್ ಸಿ.ಎಚ್, ಬಾಲಕೃಷ್ಣ ಮೂರ್ತಿ. ಪಿ. ಮುಂತಾದವರು ಭಾಗವಹಿಸಿದ್ದರು. ಈಶ್ವರ ಭಟ್ ವಂದಿಸಿದರು.