ಪತ್ತನಂತಿಟ್ಟ: ಅಯ್ಯಪ್ಪ ಭಕ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಅಯ್ಯಪ್ಪ ಭಕ್ತರು ವಾಹನಗಳಿಗೆ ಶುಲ್ಕ ವಿಧಿಸುವ ವಿವಾದದ ಹಿನ್ನೆಲೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಪತ್ತನಂತಿಟ್ಟದ ಶಿಬಿರಗಳಲ್ಲಿ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದರು.
ಟೋಕನ್ ಪ್ರಕಾರ ವಾಹನಗಳನ್ನು ಹಾದು ಹೋಗಲು ಭಕ್ತರಿಗೆ ತುಂಬಾ ತೊಂದರೆಯಾಗಿದೆ. ಸುಧೀರ್ಘ ಅವಧಿಯ ಬಳಿಕವಷ್ಟೇ ವಾಹನವೊಂದು ಹಾದು ಹೋಗುತ್ತದೆ. ಇದರಿಂದ ಭಕ್ತರು ಗಂಟೆಗಟ್ಟಲೆ ಕಾಯುವಂತಾಗಿದೆ. ಪ್ರತಿಭಟನೆ ತೀವ್ರಗೊಂಡಿದ್ದರಿಂದ ಹಲವು ವಾಹನಗಳನ್ನು ಜಪ್ತಿ ಮಾಡಬೇಕಾಯಿತು. ಪೋಲೀಸರ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿಯಲಿಲ್ಲ.