ತಿರುವನಂತಪುರಂ: ರಾಜ್ಯದಲ್ಲಿ ವಿಷಾಹಾರ ಸೇವನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಹೋಟೆಲ್‍ಗಳಿಗೆ ಹೊಸ ಸೂಚನೆ ನೀಡಿದೆ.
ಆಹಾರ ಪೊಟ್ಟಣಗಳನ್ನು(ಪಾರ್ಸೆಲ್) ವಿತರಿಸುವಾಗ ಲಕೋಟೆಯ ಮೇಲೆ ಆಹಾರ ತಯಾರಿಸಿದ ಸಮಯದ ಚೌಕಟ್ಟು ಸೇರಿದಂತೆ ಲೇಬಲ್‍ಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಆಹಾರ ತಯಾರಿಸಿದ ಸಮಯ ಮತ್ತು ಅದನ್ನು ಬಳಸಬೇಕಾದ ಸಮಯದ ಮಿತಿಯನ್ನು ನಿಖರವಾಗಿ ಲೇಬಲ್‍ನಲ್ಲಿ ದಾಖಲಿಸಬೇಕು ಎಂದು ನಿರ್ದೇಶನವು ಹೇಳುತ್ತದೆ.
ಅಂಗಡಿಗಳಿಂದ ಬರುವ ಪಾರ್ಸೆಲ್‍ಗಳ ಮೇಲೆ ಲೇಬಲ್‍ಗಳನ್ನು ಅಂಟಿಸುವಂತೆ ಸೂಚಿಸಿದ್ದರೂ ಅದನ್ನು ಪಾಲಿಸದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಕಾನೂನು ಬಿಗಿಗೊಳಿಸಲು ನಿರ್ಧರಿಸಿದೆ. ಅಂಗಡಿಗಳಿಂದ ಪಾರ್ಸೆಲ್‍ಗಳಲ್ಲಿ ಖರೀದಿಸಿದ ಊಟ, ಕರಿ, ತಿಂಡಿ ಸೇರಿದಂತೆ ಆಹಾರ ಪದಾರ್ಥಗಳಿಗೆ ಈ ಕಾನೂನು ಅನ್ವಯಿಸುತ್ತದೆ ಎಂದು ಆಹಾರ ಸುರಕ್ಷತಾ ಆಯುಕ್ತರು ಮಾಹಿತಿ ನೀಡಿರುವÀರು.
ಷವರ್ಮಾದಂತಹ ಆಹಾರದ ಪಾರ್ಸೆಲ್‍ಗಳನ್ನು ನೀಡಿದ ನಂತರ ಜನರು ತಮ್ಮ ಅನುಕೂಲ ಸಮಯದಲ್ಲಿ ಸೇವಿಸುವುದರಿಂದ ಆಹಾರ ವಿಷ ಉಂಟಾಗುತ್ತದೆ. ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ತಿನ್ನದಿದ್ದರೆ ಕೆಲವು ಆಹಾರಗಳು ಆಹಾರ ವಿಷಮಯವಾಗುತ್ತದೆ. ಇದನ್ನು ತಡೆಯಲು ಹೊಟೇಲ್ ನವರು ಪಾರ್ಸೆಲ್ ನೀಡುವಾಗ ಬಳಸಬೇಕಾದ ಸಮಯದ ಮಿತಿಯನ್ನು ಸ್ಪಷ್ಟವಾಗಿ ಗುರುತಿಸಿದಲ್ಲಿ ಸಮಯ ಮಿತಿಯಲ್ಲಿ ಊಟ ಮಾಡಲು ಅನುಕೂಲವಾಗುತ್ತದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಆಯುಕ್ತರು ತಿಳಿಸಿದ್ದಾರೆ.