ಮಂಜೇಶ್ವರ : ಕೇರಳ ಪೆÇಲೀಸ್ ಇಲಾಖೆ ಕಣ್ಣಿದ್ದು ಕುರುಡುತನ ಪ್ರದಶಿಸುತ್ತಿದೆ,. ಕೇರಳದ ನೋಟೋರಿಯಸ್ ಆರೋಪಿ,ಕೋಮು ಉದ್ದೇಶದಿಂದ ನ್ಯೂ ಮನ್ ಕಾಲೇಜಿನ ಅಫ್ಯಾಪಕ ಟಿ ಜೆ ಜೋಸೆಫ್ ಮಾಸ್ತರ್ ರ ಕೈ ಕಡಿದ ಪ್ರಮುಖ ಆರೋಪಿ, 13 ವರ್ಷ ಗಳಿಂದ ಕೇರಳ ಪೋಲೀಸರ ಕಣ್ಣು ತಪ್ಪಿಸಿ ಮಂಜೇಶ್ವರದಲ್ಲಿ ವಾಸಿಸಿ, ಇಲ್ಲಿಂದ ಮದುವೆ ಆಗಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿರಂತರ 13 ವರ್ಷಗಳ ಕಾಲ ತಪ್ಪಿಸಿ ಕೊಂಡಿದ್ದ ಆರೋಪಿಯನ್ನು ಕೇಂದ್ರ ಎನ್.ಐ.ಎ ಬಂಧಿಸುವ ವರೆಗೆ ಕೇರಳ ಪೋಲೀಸ್ ಏನು ಮಾಡುತಿತ್ತು? ಯಾರ ಓಲೈಕೆಗಾಗಿ ಇಂತಹ ಆರೋಪಿ ಗಳನ್ನು ಸಂರಕ್ಷಸಲಾಗಿತ್ತು, ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಪ್ರಶ್ನೆಸಿದೆ.
ಎನ್.ಐ.ಎ ಆರೋಪಿಗೆ ಮದುವೆ ಮಾಡಲು ಹೆಣ್ಣು ಕೊಟ್ಟ ಮನೆಯವರನ್ನು, ಸಂರಕ್ಷಣೆ ನೀಡಿದ ಸಹಚಾರರನ್ನು, ವಾಸಿಸಲು ಮನೆ ಕೊಟ್ಟವರನ್ನು, ತನಿಖೆಗೆ ಒಳಪಡಿಸಬೇಕೆಂದು ಬಿಜೆಪಿ ಅಗ್ರಹಿಸಿದೆ.
ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯಲ್ಲಿ ವಾಸಿಸುವ ಅನ್ಯ ರಾಜ್ಯ ಕಾರ್ಮಿಕರ ಬಗ್ಗೆ, ಕುಟುಂಬಗಳ ಬಗ್ಗೆ, ವ್ಯೆಕ್ತಿ ಗಳ ಬಗ್ಗೆ ಯಾವುದೇ ಮಾಹಿತಿ ಸಂಗ್ರಹಿಸುತಿಲ್ಲ., ರಸ್ತೆ ಬಡಿಗಳಲ್ಲಿ ಮಾರಕಯುಧ ಗಳನ್ನು, ಕತ್ತಿ, ಗಳನ್ನು ತಯಾರಿಸಿ ಮಾರಾಟ ಮಾಡಲು ಅವಕಾಶ ಕೊಟ್ಟವರ್ಯಾರು? ಇವರು ಎಲ್ಲಿಯವರು ಎಂದು ತನಿಖೆ ಮಾಡಬೇಕೆಂದು ಬಿಜೆಪಿ ಅಗ್ರಹಿಸಿದೆ.
ಬಿಜೆಪಿ ಮಂಜೇಶ್ವರ ಮಂಡಲ ಮಾಸಿಕ ಸಭೆ ಮಿಯಾಪದವು ನಲ್ಲಿ ಜರಗಿತು ಮಂಡಲಧ್ಯಕ್ಷ ಆದರ್ಶ್ ಬಿ ಎಂ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಉಪಾಧ್ಯಕ್ಷ ಸುಧಾಮ್ ಗೊಸಾಡ ಉದ್ಘಾಟಿಸಿದರು, ಮುಖಂಡರಾದ ಮಣಿಕಂಠ ರೈ, ಹರಿಶ್ಚಂದ್ರ ಎಂ,ಂಏ ಕೈಯಾರ, ಸುಬ್ರಮಣ್ಯ ಭಟ್, ರಕ್ಷನ್ ಅಡಕಲಾ, ಕೊಡಿ ಚಂದ್ರಶೇಖರ, ಲೋಕೇಶ್ ನೊಂದ, ಶಂಕರ ನಾರಾಯಣ ಮುಂದಿಲ,ಪೈವಳಿಕೆ ಸತ್ಯಶಂಕರ,, ಚುನಾಯಿತ ಸದಸ್ಯರು ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ರವಿ ರಾಜ್ ವರ್ಕಾಡಿ ವಂದಿಸಿದರು.