ಕಾಸರಗೋಡು: ರಾಜ್ಯ ಅಲ್ಪಸಂಖ್ಯಾತರ ಆಯೋಗವು ಫೆಬ್ರವರಿ ಎರಡನೇ ವಾರದಲ್ಲಿ ಜಿಲ್ಲೆಯಲ್ಲಿ ವಿಚಾರ ಸಂಕಿರಣ ಆಯೋಜಿಸಲಿದ್ದು, ಅಲ್ಪಸಂಖ್ಯಾತರು, ಸೂಕ್ಷ್ಮ ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರು ಸೆಮಿನಾರ್‍ನ ಭಾಗವಾಗಲಿದ್ದಾರೆ. ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಪಿ.ರೋಜಾ, ಎ. ಸೈಫುದ್ದೀನ್ ಹಾಜಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವಿಚಾರ ಸಂಕಿರಣದ ಕುರಿತು ಅವಲೋಕನ ನಡೆಯಿತು. ಅಲ್ಪಸಂಖ್ಯಾತರಿಗೆ ಆಡಳಿತಾತ್ಮಕವಾಗಿ ನೀಡಿರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತಿದ್ದು, ಇದರಲ್ಲಿ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮಕೈಗೊಳ್ಳಲಾಗುವುದು ಎಂದು ಆಯೋಗದ ಸದಸ್ಯರು ತಿಳಿಸಿದರು.
ಸಂಘಟನಾ ಸಮಿತಿ ರಚನೆ:
ವಿಚಾರಸಂಕಿರಣ ಯಶಸ್ಸಿಗಾಗಿ ಸಂಘಟನಾ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ನಾಸರ್ ಚೆರ್ಕಳಂ ಹಾಗೂ ಪ್ರಧಾನ ಸಂಚಾಲಕರಾಗಿ ಫಾದರ್ ಪೀಟರ್ ಪರಕ್ಕಾಟ್ಟಿಲ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸಿ. ಮುಹಮ್ಮದ್‍ಕುಞÂ, ಸುಲೈಮಾನ್ ತ್ರಿಕರಿಪುರ, ಮುಹಮ್ಮದ್ ಶರೀಫ್, ಮನ್ಸೂರ್ ಕಂಬಾರ್ ಮತ್ತು ಶೆಫೀಕ್ ನಸ್ರುಲ್ಲ, ಫಾದರ್ ಜಾನ್ಸನ್ ನೆಡುಂಬರಂಪಿಲ್, ಜಲೀಲ್ ಕಡವತ್, ಜಾಯಿಂಟ್ ಕನ್ವೀನರ್‍ಗಳಾಗಿ ಫಾದರ್ ಜಾರ್ಜ್ ವಳ್ಳಿಮಲೈಲ್, ವಿಜಯನ್ ಬಾರಡ್ಕ, ನ್ ಮತ್ತು ಸಿಎಂಎ ಚೇರೂರ್ ಆಯ್ಕೆಯಾದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಥಾಮ್ಸನ್, ಟಾಮ್ ಕೆ.ಯೇಶುದಾ, ಡಾ. ಕೆ.ಪಿ.ಗೀತಾ, ಸಿ. ಮುಹಮ್ಮದ್ ಕುಞ, ಅರುಣ್ ಕ್ರಾಸ್ತಾ, ಜಲೀಲ್ ಕಡವತ್, ಅಬೂಬಕರ್ ಉಪ್ಪಳ, ಟಿ.ಎಂ.ಮುಹಮ್ಮದ್ ಶರೀಫ್ ಮೊದಲಾದವರು ಉಪಸ್ಥೀತರಿದ್ದರು.