ಕೊಚ್ಚಿ: ಸಂತ್ರಸ್ಥೆಯನ್ನು ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಪ್ಲೀಡರ್(ಅಭಿಯೋಜಕ) ಪಿಜಿ ಮನು ಶರಣಾಗಿದ್ದಾನೆ. ಎರ್ನಾಕುಳಂ ಪುತ್ತಂಕುರಿಶ್ ಪೋಲೀಸರ ಮುಂದೆ ಶರಣಾಗಿದ್ದಾನೆ.
ಈ ಹಿಂದೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹತ್ತು ದಿನಗಳೊಳಗೆ ತನಿಖಾಧಿಕಾರಿ ಮುಂದೆ ಶರಣಾಗುವಂತೆಯೂ ಹೈಕೋರ್ಟ್ ಆದೇಶಿಸಿತ್ತು.
ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾಗಿದ್ದ ಮಹಿಳೆಯನ್ನು ಕಚೇರಿಗೆ ಕರೆತಂದು ಕಾನೂನು ನೆರವು ನೀಡುವ ಭರವಸೆ ನೀಡಿ ಕಿರುಕುಳ ನೀಡಿದ್ದ ಎಂಬುದು ಮನು ವಿರುದ್ಧದ ಪ್ರಕರಣ. ಅತ್ಯಾಚಾರ ಮತ್ತು ಐಟಿ ಕಾಯ್ದೆಯ ಆರೋಪಗಳನ್ನು ದಾಖಲಿಸಲಾಗಿದೆ. 2018ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಜಿ.ಮನು ಅವರನ್ನು ಭೇಟಿ ಮಾಡಲು ದೂರುದಾರರು ಮತ್ತು ಆಕೆಯ ಪೋಷಕರು ಬಮದಿದ್ದರು. ಆದರೆ ಬಳಿಕ ಹಲವು ಬಾರಿ ಬೆದರಿಕೆ ಹಾಕಿ ಕಡವಂತ್ರದಲ್ಲಿರುವ ಕಚೇರಿಗೆ ಕರೆಸಿ 26 ವರ್ಷದ ಯುವತಿಗೆ ಅತ್ಯಾಚಾರ ಎಸಗಿದ್ದ. ಯುವತಿಯ ಮನೆಗೆ ನುಗ್ಗಿ ಆಕೆಗೆ ಕಿರುಕುಳ ನೀಡಲು ಯತ್ನಿಸಿದ ಆತ, ಅನುಮತಿಯಿಲ್ಲದೆ ಆಕೆಯ ವೈಯಕ್ತಿಕ ಚಿತ್ರ ತೆಗೆದು ಆಕೆಯ ಪೋನ್ ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ. ಅಲ್ಲದೆ ದೃಶ್ಯಾವಳಿಗಳನ್ನು ಹರಡುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.
ಮಹಿಳೆಯ ದೂರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡ ನಂತರ, ಅಡ್ವೊಕೇಟ್ ಜನರಲ್ ಆರೋಪಿಯಿಂದ ಲಿಖಿತ ರಾಜೀನಾಮೆ ಪಡೆದರು. ಪಿ.ಜಿ.ಮನು ಅವರು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಾಸಿಕ್ಯೂಟರ್ ಮತ್ತು ವಿಶೇಷ ಅಭಿಯೋಜಕರಾಗಿ ಕೆಲಸ ಮಾಡಿದ್ದ.