ಆಲಪ್ಪುಳ: ವಿಶ್ವಸಂಸ್ಥೆಯು ಕುಟ್ಟನಾಡ್ ಗೆ ಕೃಷಿ ಪರಂಪರೆಯ ತಾಣವಾಗಿ ನೀಡಿದ್ದ ಫಲಕ ನಾಪತ್ತೆಯಾಗಿದ್ದುದು ಇದೀಗ ಪತ್ತೆಯಾಗಿದೆ. ಇದು ತನ್ನ ಬಳಿ ಇದೆ ಎಂದು ಡಾ. ಎಂ.ಎಸ್. ಸ್ವಾಮಿನಾಥನ್ ಅವರ ಪುತ್ರಿ ಹಾಗೂ ಖ್ಯಾತ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ಸಚಿವ ಪಿ. ಪ್ರಸಾದ್ ಮಾಹಿತಿ ನೀಡಿದರು. ಇದನ್ನು ಸಚಿವರು ಖಚಿತಪಡಿಸಿದ್ದಾರೆ. ಮುಂದಿನ ದಿನದಲ್ಲಿ ಅದನ್ನೇ ತಂದು ಕುಟ್ಟನಾಡಿನಲ್ಲಿ ಅಳವಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಫಲಕ ಕಾಣೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಸಚಿವರು ಅದನ್ನು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅಷ್ಟರಲ್ಲಿ ಸುದ್ದಿ ತಿಳಿದ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ಫಲಕವನ್ನು ಹೊಂದಿರುವ ಬಗ್ಗೆ ತಿಳಿಸಿದರು. ಪ್ರಸ್ತುತ, ಸೌಮ್ಯಾ ಸ್ವಾಮಿನಾಥನ್ ಅವರು ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್‍ನ ಅಧ್ಯಕ್ಷರಾಗಿದ್ದಾರೆ.
2012 ರಲ್ಲಿ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಕುಟ್ಟನಾಡ್‍ಗೆ ಅಂತರರಾಷ್ಟ್ರೀಯ ಕೃಷಿ ಪರಂಪರೆಯ ಸ್ಥಾನಮಾನವನ್ನು ನೀಡಿತ್ತು. ಡಾ. ಎಂ.ಎಸ್. ಸ್ವಾಮಿನಾಥನ್ ಅಂದು ಅದನ್ನು ಮೊ ಪಡಕೊಂಡಿದ್ದರು. ನಂತರ ಸ್ವಾಮಿನಾಥನ್ ಪ್ರತಿಷ್ಠಾನದ ರಜತ ಮಹೋತ್ಸವ ಸಮಾರಂಭದಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಕುಮಾರ್ ಮುಖರ್ಜಿ ಅವರು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಫಲಕವನ್ನು ಹಸ್ತಾಂತರಿಸಿದರು. ಆದರೆ, ಇದು ಕುಟ್ಟನಾಡಿನಲ್ಲಿ ಸ್ಥಾಪನೆಯಾಗಿರಲಿಲ್ಲ. ನಂತರ ಅದು ಕಣ್ಮರೆಯಾಯಿತು.