ನವದೆಹಲಿ: ನ್ಯಾಯಾಲಯದ ವಿಚಾರಣೆ ವೇಳೆ ಸರ್ಕಾರಿ ಅಧಿಕಾರಿಗಳನ್ನು ಸಮನ್ಸ್ ನೀಡಿ ಕರೆಸಿಕೊಳ್ಳುವಾಗ ಹೈಕೋರ್ಟ್‌ಗಳು ಅನುಸರಿಸಬೇಕಾದ ಸಾಮಾನ್ಯ ಕಾರ್ಯಾಚರಣಾ ವಿಧಾನವನ್ನು(ಎಸ್‌ಒಪಿ) ಸುಪ್ರೀಂ ಕೋರ್ಟ್ ಬುಧವಾರ ಬಿಡುಗಡೆ ಮಾಡಿದೆ.
ನವದೆಹಲಿ: ನ್ಯಾಯಾಲಯದ ವಿಚಾರಣೆ ವೇಳೆ ಸರ್ಕಾರಿ ಅಧಿಕಾರಿಗಳನ್ನು ಸಮನ್ಸ್ ನೀಡಿ ಕರೆಸಿಕೊಳ್ಳುವಾಗ ಹೈಕೋರ್ಟ್‌ಗಳು ಅನುಸರಿಸಬೇಕಾದ ಸಾಮಾನ್ಯ ಕಾರ್ಯಾಚರಣಾ ವಿಧಾನವನ್ನು(ಎಸ್‌ಒಪಿ) ಸುಪ್ರೀಂ ಕೋರ್ಟ್ ಬುಧವಾರ ಬಿಡುಗಡೆ ಮಾಡಿದೆ.
ಅಧಿಕಾರಿಗಳನ್ನು ಅವಮಾನಿಸುವ ಅಥವಾ ಅವರ ಬಗ್ಗೆ ಅನಗತ್ಯ ಕಾಮೆಂಟ್ ಮಾಡದಂತೆ ನ್ಯಾಯಾಲಯವು ಎಚ್ಚರಿಕೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದ್ದು, ಎಸ್‌ಒಪಿಯಲ್ಲಿ ನ್ಯಾಯಾಲಯಗಳು ವಿಚಾರಣೆ ವೇಳೆ ಅಧಿಕಾರಿಗಳಿಗೆ ಅನಗತ್ಯವಾಗಿ ಸಮನ್ಸ್ ನೀಡುವುದರಿಂದ ದೂರವಿರಬೇಕಾಗುತ್ತದೆ ಎಂದು ಒತ್ತಿ ಹೇಳಲಾಗಿದೆ.
ಸಾಕ್ಷಿ ಹೇಳುವುದು, ಸಾರಾಂಶ ಪ್ರಕ್ರಿಯೆಗಳು ಸೇರಿದಂತೆ ಕೆಲವೊಮ್ಮೆ ಅಧಿಕಾರಿಗಳ ವೈಯಕ್ತಿಕ ಉಪಸ್ಥಿತಿಯು ಅಗತ್ಯವಾಗಬಹುದು. ಉಳಿದಂತೆ, ಅಫಿಡವಿಟ್ ಮತ್ತು ಇತರ ದಾಖಲೆಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಬಹುದಾದರೆ, ವೈಯಕ್ತಿಕ ಉಪಸ್ಥಿತಿಯು ಅಗತ್ಯವಿರುವುದಿಲ್ಲ. ವಾಡಿಕೆಯ ಕ್ರಮವಾಗಿ ಸಮನ್ಸ್ ನೀಡಬಾರದು ಎಂದು ನ್ಯಾಯಾಲಯ ಹೇಳಿದೆ.
ತೀರ್ಪನ್ನು ಪ್ರಕಟಿಸಿದ ಸಿಜೆಐ, ಕೇವಲ ಅವರ(ಅಧಿಕಾರಿಗಳ) ದೃಷ್ಟಿಕೋನವು ನ್ಯಾಯಾಲಯದ ದೃಷ್ಟಿಕೋಲಕ್ಕಿಂತ ಭಿನ್ನವಾಗಿದೆ ಎಂಬ ಕಾರಣಕ್ಕೆ ಅಧಿಕಾರಿಗಳಿಗೆ ಸಮನ್ಸ್ ನೀಡುವಂತಿಲ್ಲ ಎಂದು ಹೇಳಿದ್ದಾರೆ.
ಇದೇವೇಳೆ, ಉತ್ತರ ಪ್ರದೇಶದ ಹಣಕಾಸು ಇಲಾಖೆಯ ಇಬ್ಬರು ಕಾರ್ಯದರ್ಶಿಗಳನ್ನು ಕಸ್ಟಡಿಗೆ ತೆಗೆದುಕೊಂಡ ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್ ನೀಡುವಾಗ ಅನುಸರಿಸಬೇಕಾದ ನಿಯಮಗಳು ಕುರಿತಾದ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಈ ಹಿಂದೆ ಪೀಠ ಹೇಳಿತ್ತು.