ತ್ರಿಶೂರ್: ತ್ರಿಪ್ರಯಾರ್ ದೇವಾಲಯವು ಕೇರಳದ ಪ್ರಸಿದ್ಧ ಶ್ರೀರಾಮ ದೇವಾಲಯವಾಗಿದೆ. ಎರಡು ದಿನಗಳ ಭೇಟಿಗೆ ಆಗಮಿಸಿರುವ ಪ್ರಧಾನಿ ಇಂದು ತ್ರಿಪ್ರಯಾರ್ ದೇವಾಲಯಕ್ಕೆ ಭೇಟಿ ನೀಡಿದರು.
ಮುಖ್ಯ ಸೇವೆಯಾದ ಮೀನ್ನೂಟ್(ಮೀನುಗಳಿಗೆ ನೈವೇದ್ಯ ಅರ್ಪಣೆ) ಸಮಾರಂಭದಲ್ಲಿಯೂ ಭಾಗವಹಿಸಿದ್ದರು. ದೇವಸ್ಥಾನದ ಕೊಳ ತಲುಪಿ ಮೀನುಗಳಿಗೆ ಆಹಾರ ನೀಡಿದರು.
ದೇವಸ್ಥಾನದಲ್ಲಿ ವೇದಾರ್ಚನೆ, ಭಜನೆಯಲ್ಲಿ ಪಾಲ್ಗೊಂಡರು. ತ್ರಿಪ್ರಯಾರ್‍ಗೆ ಭೇಟಿ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿ.
ದ್ವಾರಕಾದಲ್ಲಿರುವ ಶ್ರೀಕೃಷ್ಣನ ವಿಗ್ರಹ ಇಲ್ಲಿ ಪೂಜಿಸಲ್ಪಡುತ್ತಿದೆ ಎಂದು ನಂಬಲಾಗಿದೆ. ಕಾಲಾಂತರದಲ್ಲಿ ಈ ವಿಗ್ರಹ ಕೊಚ್ಚಿಕೊಂಡು ಹೋಯಿತು.
ನಂತರ ಮೀನುಗಾರರು ಈ ವಿಗ್ರಹವನ್ನು ಪಡೆದು ತ್ರಿಪ್ರಯಾರ್‍ನಲ್ಲಿ ಸ್ಥಾಪಿಸಿದರು ಎಂದು ಪುರಾಣಗಳು ಹೇಳುತ್ತವೆ.
ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪ್ರಧಾನಿಯವರು ತ್ರಿಪ್ರಯಾರ್‍ನಿಂದ ವಲಪ್ಪಾಡ್‍ನ ಹೆಲಿಪ್ಯಾಡ್ ಮೈದಾನದವರೆಗೆ ರೋಡ್ ಶೋ ನಡೆಸಿದರು. ಜನರು ಪುಷ್ಪವೃಷ್ಟಿ ಮಾಡುವ ಮೂಲಕ ಪ್ರಧಾನಿಯವರನ್ನು ಸ್ವಾಗತಿಸಿದರು.