ನವದೆಹಲಿ: ಸ್ಮಾರ್ಟ್ ಫೋನ್, ಐಫೋನ್ ಇಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಸಾಮಾನ್ಯವಾಗಿ ಸಿಟಿಯ ಜನರು ಮಕ್ಕಳು ಹೊಂದಿರುತ್ತಾರೆ ಎಂಬ ಸಾಮಾನ್ಯ ನಂಬಿಕೆ. ಹೆಣ್ಣುಮಕ್ಕಳಿಗಿಂತ ಇಂತವುಗಳ ಮೇಲೆ ಗಂಡುಮಕ್ಕಳಿಗೇ ಒಲವು ಹೆಚ್ಚು ಎಂದು ಭಾವಿಸುತ್ತೇವೆ.
ಹಳ್ಳಿ ಪ್ರದೇಶಗಳಲ್ಲಿ ಗಂಡು ಮಕ್ಕಳು ಹೆಣ್ಣು ಮಕ್ಕಳಿಗಿಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುತ್ತಾರಂತೆ, ಅವರಿಗೆ ಅದರಲ್ಲಿ ಹೆಚ್ಚು ಒಲವು ಎನ್ನುತ್ತದೆ ಅಧ್ಯಯನ. ಇದರಲ್ಲಿ ಹೆಚ್ಚು ಸ್ವಾತಂತ್ರ್ಯವನ್ನು ಆನಂದಿಸುತ್ತಾರೆ ಮತ್ತು ತಮ್ಮ ಅಧ್ಯಯನವನ್ನು ಮುಂದುವರಿಸಲು ಆಯ್ಕೆಯನ್ನು ಹೊಂದಿದ್ದಾರೆ ಎಂದು ಇತ್ತೀಚಿನ ವಾರ್ಷಿಕ ಶಿಕ್ಷಣ ಸ್ಥಿತಿ ವರದಿ (ASER) ಯ ಸಂಶೋಧನೆ ಹೇಳುತ್ತದೆ. ಅದರ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಲಿಂಗ ವಿಭಜನೆ ಹೆಚ್ಚಾಗಿದೆ.
ಆದಾಗ್ಯೂ, 26 ರಾಜ್ಯಗಳಾದ್ಯಂತ 28 ಜಿಲ್ಲೆಗಳಲ್ಲಿ 14ರಿಂದ 18 ವರ್ಷ ವಯಸ್ಸಿನ 34,745 ಹದಿಹರೆಯದ ಯುವಜನತೆಯ ಸಮೀಕ್ಷೆಯಿಂದ ಹೊರಹೊಮ್ಮಿದ ಒಂದು ಭರವಸೆಯೆಂದರೆ ಹೆಣ್ಣು ಮಕ್ಕಳು ಹೆಚ್ಚಾಗಿ ಇತ್ತೀಚಿನ ವರ್ಷಗಳಲ್ಲಿ ಕಲಿಕೆಯಿಂದ ಶಾಲೆಯಿಂದ ಹೊರಗುಳಿಯದೇ ಇರುವುದು.
ಅನೇಕ ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ಹೇಗೆ ಇಷ್ಟಪಡುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗುತ್ತದೆ. ಮನೆಕೆಲಸದಿಂದ ಹೊರಗುಳಿಯಲು ಅವರಿಗೆ ಇದು ಏಕೈಕ ಮಾರ್ಗವಾಗಿದೆ. ಆದಾಗ್ಯೂ, ಶಾಲೆಗಳಿಗೆ ಹೋಗುವ ಹೆಣ್ಣುಮಕ್ಕಳು ಸಾಕಷ್ಟು ಜ್ಞಾನ ಅಥವಾ ಕೌಶಲ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗುವುದಿಲ್ಲ ಎನ್ನುತ್ತದೆ ಸಮೀಕ್ಷೆ.
ದಾಖಲಾತಿಯಲ್ಲಿನ ಲಿಂಗ ತಾರತಮ್ಯ ಕಡಿಮೆಯಾಗುತ್ತಿರುವುದು ಸಂತಸ ಪಡುವ ಸಂಗತಿ. ಇನ್ನು ಗ್ರಾಮೀಣ ಭಾರತದಲ್ಲಿನ ಶಾಲಾ ಮಕ್ಕಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾಗಿದೆ. ಸ್ಮಾರ್ಟ್‌ಫೋನ್ ನ್ನು ಹೇಗೆ ಬಳಸಬೇಕೆಂದು ತಿಳಿದಿರುವ ಹುಡುಗಿಯರಲ್ಲಿ ಕೇವಲ ಶೇಕಡಾ 19.8ರಷ್ಟು ಮಾತ್ರ ಸ್ಮಾರ್ಟ್‌ಫೋನ್ ನ್ನು ಹೊಂದಿದ್ದಾರೆ.
ಯೂಟ್ಯೂಬ್ ವೀಡಿಯೊವನ್ನು ಹುಡುಕುವುದು, ಅದನ್ನು ಫಾರ್ವರ್ಡ್ ಮಾಡುವುದು, ಉತ್ತರವನ್ನು ಹುಡುಕಲು ಇಂಟರ್ನೆಟ್ ಬ್ರೌಸ್ ಮಾಡುವುದು, ಅಲಾರಾಂ ಹೊಂದಿಸುವುದು, ಆನ್‌ಲೈನ್ ಶಾಪಿಂಗ್, ಸುರಕ್ಷತಾ ಕ್ರಮಗಳು ಮತ್ತು ಗೂಗಲ್ ಮ್ಯಾಪ್‌ಗಳನ್ನು ಬಳಸುವಂತಹ ಸರಳ ಕಾರ್ಯಗಳನ್ನು ನಿರ್ವಹಿಸುವಲ್ಲಿ ಹೆಣ್ಣುಮಕ್ಕಳು ಗಂಡುಮಕ್ಕಳನ್ನು ಮೀರಿಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ.