ಮುಂಬೈ: ಅಮೆರಿಕದ ವಿಮಾನ ತಯಾರಿಕಾ ಕಂಪನಿ ಬೋಯಿಂಗ್ ಉತ್ತರಪ್ರದೇಶದ ಖುರ್ಜಾದಲ್ಲಿ ದಾಸ್ತಾನು ಘಟಕ ಸ್ಥಾಪಿಸುವುದಾಗಿ ಘೋಷಿಸಿದೆ. ಕಂಪನಿಯು ಭಾರತದಲ್ಲಿ ತೆರೆಯುತ್ತಿರುವ ತನ್ನ ಮೊದಲ ಉಗ್ರಾಣ ಇದಾಗಿದೆ.
ಮುಂಬೈ: ಅಮೆರಿಕದ ವಿಮಾನ ತಯಾರಿಕಾ ಕಂಪನಿ ಬೋಯಿಂಗ್ ಉತ್ತರಪ್ರದೇಶದ ಖುರ್ಜಾದಲ್ಲಿ ದಾಸ್ತಾನು ಘಟಕ ಸ್ಥಾಪಿಸುವುದಾಗಿ ಘೋಷಿಸಿದೆ. ಕಂಪನಿಯು ಭಾರತದಲ್ಲಿ ತೆರೆಯುತ್ತಿರುವ ತನ್ನ ಮೊದಲ ಉಗ್ರಾಣ ಇದಾಗಿದೆ.
ಸರಕು ಸಾಗಣೆ ಸೇವೆ ಒದಗಿಸುವ ಡಿಬಿ ಶೆಂಕರ್ ಸಂಸ್ಥೆಯ ಸಹಭಾಗಿತ್ವದಡಿ ಸುಮಾರು 36 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಘಟಕ ತೆರೆಯಲಾಗುತ್ತಿದೆ.
ಸದ್ಯ ಜಾಗತಿಕಮಟ್ಟದಲ್ಲಿ ಬೋಯಿಂಗ್ ಉಪಕರಣಗಳನ್ನು ವಿತರಿಸುವ ಏಳು ದಾಸ್ತಾನು ಘಟಕಗಳಿವೆ. ಭಾರತದಲ್ಲಿ ತೆರೆಯುತ್ತಿರುವುದು ಎಂಟನೇ ಘಟಕವಾಗಿದೆ.
'ಭಾರತದಲ್ಲಿ ಬೋಯಿಂಗ್ ಉಪಕರಣಗಳಿಗೆ ಸಂಬಂಧಿಸಿದ ಬಿಡಿ ಭಾಗಗಳನ್ನು ತ್ವರಿತವಾಗಿ ಪೂರೈಸಲು ಇದರಿಂದ ನೆರವಾಗಲಿದೆ. ವಿಮಾನ ನಿರ್ವಹಣೆ, ದುರಸ್ತಿ (ಎಂಆರ್‌ಒ) ಸೇವಾ ಕೈಗಾರಿಕೆಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ' ಎಂದು ಬೋಯಿಂಗ್ ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ ತಿಳಿಸಿದ್ದಾರೆ.