ಕಾಸರಗೋಡು: ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು, ಮಂಗಳೂರಿನ ರಂಗ ಸಂಗಾತಿ ಸಹಕಾರದಲ್ಲಿ ಪ್ರೊ.ವಿವೇಕ ರೈ ಅವರ ಮನೆ `ಸುಯಿಲ್'ನಲ್ಲಿ ವಿಶಿಷ್ಟ ಕಾರ್ಯಕ್ರಮ ನಡೆಯಿತು.
ರೈ ಅವರಿಗೆ ತೀರಾ ಆಪ್ತರಾದ ಸುಮಾರು 25 ಸಮಾನ ಮನಸ್ಕರೊಡನೆ ಎರಡು ಗಂಟೆ ಅನೌಪಚಾರಿಕ ಮಾತು ಸಂವಾದ ಇದಾಗಿತ್ತು. ಆರಂಭದಲ್ಲಿ ಕಾಸರಗೋಡು ಚಿನ್ನಾ ಕಾರ್ಯಕ್ರಮ ಆಯೋಜಿಸಲು ಕಾರಣ ಹಾಗು ಅದರ ರೂಪುರೇಷೆಗಳನ್ನು ತಿಳಿಸಿದರು. ಡಾ.ನಾ.ದಾ.ಶೆಟ್ಟಿ ಅವರು ಪರಿಚಯಿಸಿದರು. ವಿವೇಕ ರೈ ಅವರು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆದ ನಾಲ್ಕು ಕವನಗಳನ್ನು ಡಾ. ಧÀನಂಜಯ ಕುಂಬ್ಳೆ, ಡಾ.ಮೀನಾಕ್ಷಿ ರಾಮಚಂದ್ರ, ಡಾ.ಅಕ್ಷಯ ಶೆಟ್ಟಿ ಹಾಗು ಡಾ.ನಾ.ದಾ, ಮಂಜುಳ ಶೆಟ್ಟಿ ವಾಚನ ಮಾಡಿದರು. ಪ್ರತಿಯೊಂದು ಕವನ ರಚನೆಯ ಸಂದಭರ್À ವಿಶೇಷತೆಗಳನ್ನು ಪ್ರೊ.ವಿವೇಕ ರೈ ವಿವರಿಸಿದರು. ವಿವೇಕ ರೈಗಳ ಬಗ್ಗೆ ಡಾ.ನರಸಿಂಹ ಮೂರ್ತಿ ಆರ್, ಡಾ.ಲಕ್ಷ್ಮೀನಾರಾಯಣ ಭಟ್, ಡಾ.ಸುಬ್ಬಣ್ಣ ರೈ ಹಾಗು ವಿವೇಕ ರೈ, ಅವರ ಕಿರಿಯ ಸಹೋದರ ಉಲ್ಲಾಸ ರೈ ಮಾತನಾಡಿದರು. ಇಡೀ ಕಾರ್ಯಕ್ರಮವನ್ನು ಅತಿ ಗಂಭೀರತೆಯಿಂದ ಪಾರುಮಾಡಿ ಅತ್ಯಂತ ಸ್ವಾರಸ್ಯಕರವಾಗಿ ಚಿನ್ನಾ ಕಾಸರಗೋಡು ತಮ್ಮ ವಿದ್ಯಾರ್ಥಿ ದೆಸೆಯ ದಿನಗಳು ನಂತರ ಹಿರಿಯ ವಿದ್ವಾಂಸರು, ಕಲಾವಿದರೊಡನೆ ಒಡನಾಡಿದ ಘಟನೆಗಳನ್ನು ಹಂಚಿಕೊಂಡರು. ಎಲ್ಲ ಸದಸ್ಯರು ಸಂವಾದದಲ್ಲಿ ಪಾಲ್ಗೊಂಡರು. ಶಶಿರಾಜ್ ರಾವ್ ಕಾವೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.