ಕಾಸರಗೊಡು: ಸಮಗ್ರ ಶಿಕ್ಷಾ ಕಾಸರಗೋಡು ಬ್ಲಾಕ್ ಮಟ್ಟದಲ್ಲಿ ಆಯೋಜಿಸಿದ ಪ್ರತಿಭೋತ್ಸವ ಹಾಗೂ ವಿಜಯೋತ್ಸವದಲ್ಲಿ ದೆಲಂಪಾಡಿ ಸನಿಹದ ಎಡಪರಂಬ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸಾಧನೆ ಮೆರೆದಿದ್ದಾರೆ.
ಶಾಲೆಯ ಪ್ರಾದೇಶಿಕ ಪ್ರತಿಭಾ ಕೇಂದ್ರದಿಂದ ವಿಜೇತರಾದ ವಿದ್ಯಾರ್ಥಿಗಳು ಹಾಗೂ ರಕ್ಷಕರು ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆಯನ್ನು ಗಳಿಸಿದ್ದಾರೆ. ಎಲ್.ಪಿ. ಮಟ್ಟದ ಜಾನಪದ ಹಾಡು ಸ್ಪರ್ಧೆಯಲ್ಲಿ ಜಾನ್ವಿ ಎಸ್ ವೈ, ಮಾಪ್ಪಿಳಪ್ಪಾಟ್ ಸ್ಪರ್ಧೆಯಲ್ಲಿ ಸಾಯೂಜ್ .ಪಿ, ಸ್ಕಿಪ್ಪಿಂಗ್ ನಲ್ಲಿ ನಿರಂಜನ ಸುರೇಶ್ ಪ್ರಥಮ ಸ್ಥಾನವನ್ನೂ ಸಿನಿಮಾ ಹಾಡಿನಲ್ಲಿ ಆರ್ಯ ದೇವ್ ದ್ವಿತೀಯ ಸ್ಥಾನವನ್ನೂ ಪಡೆದಿದ್ದಾರೆ.
ರಕ್ಷಕರಿಗೆ ಏರ್ಪಡಿಸಿದ ಜಾನಪದ ಹಾಡು ಸ್ಪರ್ಧೆಯಲ್ಲಿ ಪೂರ್ಣಿಮಾ ಕೊಳತ್ತಿಲ ಹಾಗೂ ವಾಕಿಂಗ್ ಸ್ಪರ್ಧೆಯಲ್ಲಿ ಸುಮಲತಾ ಟಿ ಪಾರಕ್ಕಡವ್ ರವರು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.