ಬೆಂಗಳೂರು: ಖಗೋಳದಲ್ಲಿ ಹೊಮ್ಮುವ ಕಿರಣಗಳ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಉಡಾವಣೆ ಮಾಡಿರುವ 'ಎಕ್ಸ್‌ಪೊಸ್ಯಾಟ್' ಉಪಗ್ರಹದಲ್ಲಿ ಅಳವಡಿಸಿದ್ದ 'ಎಕ್ಸ್‌ಸ್ಪೆಕ್ಟ್', ಖಗೋಳದಲ್ಲಿ ಮೂಡಿದ್ದ ಎಕ್ಸ್‌ರೆದ ಪ್ರಥಮ ಚಿತ್ರವನ್ನು ಸೆರೆಹಿಡಿದಿದೆ.

'ಕ್ಯಾಸಿಯೊಪಿಯಾ ಎ' ಎಂಬ ಬೃಹತ್ ನಕ್ಷತ್ರದ ಅವಶೇಷದಲ್ಲಿ ಹೊಮ್ಮಿದ್ದ ಎಕ್ಸ್‌ರೆ ಅನ್ನು ಉಪಗ್ರಹದಲ್ಲಿ ಅಳವಡಿಸಲಾಗಿರುವ 'ಎಕ್ಸ್‌ಸ್ಪೆಕ್ಟ್' ಸೆರೆಹಿಡಿದಿದೆ. ಈ ಸಾಧನವನ್ನು ಜನವರಿ 5ರಂದು ಕಾರ್ಯಾರಂಭಗೊಳಿಸಲಾಗಿತ್ತು ಎಂದು ಇಸ್ರೊ ಗುರುವಾರ ಪ್ರಕಟಿಸಿದೆ.
'ಎಕ್ಸ್‌ಸ್ಪೆಕ್ಟ್' ಅಥವಾ 'ಎಕ್ಸ್-ರೇ ಸ್ಪೆಕ್ಟ್‌ಟ್ರಾಸ್ಕೊಪಿಯ' ಸಾಮರ್ಥ್ಯವನ್ನು ಪರಿಶೀಲಿಸುವ ಪರಿಶೀಲನಾ ಹಂತದಲ್ಲಿ ಈ ಚಿತ್ರ ಸೆರೆಹಿಡಿಯಲಾಗಿದೆ ಎಂದು ತಿಳಿಸಿದೆ. ಈ ಕಿರಣವು ಮ್ಯಾಗ್ನಿಷಿಯಂ, ಸಿಲಿಕಾನ್, ಗಂಧಕ, ಕ್ಯಾಲ್ಷಿಯಂ, ಕಬ್ಬಿಣ ಸಂವಾದಿಯಾಗಿದೆ.
'ಕ್ಯಾಸಿಯೊಪಿಯ ಎ' ಎಂಬುದು ಬ್ರಹ್ಮಾಂಡ ವಿಕಸನದ ಪ್ರಕ್ರಿಯೆಯಲ್ಲಿ ಛಿದ್ರಗೊಂಡ ನಕ್ಷತ್ರದ ಅವಶೇಷವಾಗಿದ್ದು, ಭೂಮಿಯಿಂದ ಸುಮಾರು 11 ಸಾವಿರ ಬೆಳಕಿನ ವರ್ಷದಷ್ಟು ದೂರದಲ್ಲಿದೆ.
ಎಕ್ಸ್‌ಪೆಕ್ಟ್ ಅನ್ನು ಯು.ಆರ್. ರಾವ್ ಉಪಗ್ರಹ ಕೇಂದ್ರದ ಬಾಹ್ಯಾಕಾಶ ಖಗೋಳತಜ್ಞರ ತಂಡ ಅಭಿವೃದ್ಧಿಪಡಿಸಿದೆ. ಸುದೀರ್ಘ ಅವಧಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.