ನವದೆಹಲಿ: ರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ಅನುಕೂಲ ಕಲ್ಪಿಸಲು ದೇಶದ 25 ಪ್ರಮುಖ ಧಾರ್ಮಿಕ ಸ್ಥಳಗಳಿಂದ ಅಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸಲು ಭಾರತೀಯ ರೈಲ್ವೆ ಯೋಜನೆ ಹಾಕಿಕೊಂಡಿದೆ.
ನವದೆಹಲಿ: ರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ಅನುಕೂಲ ಕಲ್ಪಿಸಲು ದೇಶದ 25 ಪ್ರಮುಖ ಧಾರ್ಮಿಕ ಸ್ಥಳಗಳಿಂದ ಅಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸಲು ಭಾರತೀಯ ರೈಲ್ವೆ ಯೋಜನೆ ಹಾಕಿಕೊಂಡಿದೆ.
ಅಯೋಧ್ಯೆಯಿಂದ ಶೀಘ್ರದಲ್ಲೇ ಪುರಿ, ತಿರುಪತಿ, ಅಮೃತಸರ, ವೈಷ್ಣೋದೇವಿ, ಶಿರಡಿ, ದ್ವಾರಕ, ಉಜ್ಜಯಿನಿ, ತಿರುನೆಲ್ವೇಲಿ ಮತ್ತು ಚಿತ್ರಕೂಟ ಸೇರಿದಂತೆ ಧಾರ್ಮಿಕ ತಾಣಗಳಿಗೆ ರೈಲು ಸೇವೆ ಆರಂಭಿಸಲು ಅಗತ್ಯ ಪ್ರಕ್ರಿಯೆಯನ್ನು ರೈಲ್ವೆ ಇಲಾಖೆ ಆರಂಭಿಸಿದೆ.
'ಹೊಸ ರೈಲು ಸಂಪರ್ಕಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು. ಇವುಗಳಲ್ಲಿ ಹೆಚ್ಚಿನವು ಅಮೃತ್ ಭಾರತ್ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಆಗಿರಲಿವೆ' ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಮರು ಅಭಿವೃದ್ಧಿ ಆಗಿರುವ ಅಯೋಧ್ಯಾ ಧಾಮ ರೈಲು ನಿಲ್ದಾಣವು ಪ್ರತಿದಿನ 50 ಸಾವಿರ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ.
ಅಯೋಧ್ಯೆಯಿಂದ ಈಗಾಗಲೇ ದೆಹಲಿ, ಕಾನ್ಪುರ, ಲಖನೌ ಮತ್ತು ಗೋರಖ್‌ಪುರಕ್ಕೆ ನೇರ ಹಾಗೂ ಎಕ್ಸ್‌ಪ್ರೆಸ್ ರೈಲು ಸಂಪರ್ಕ ಇದೆ. ದೆಹಲಿಯ ಅನಂದ್ ವಿಹಾರ್‌ಗೆ ವಂದೇ ಭಾರತ್ ರೈಲು ಸೇವೆಯನ್ನು ಕಳೆದ ತಿಂಗಳು ಆರಂಭಿಸಲಾಗಿತ್ತು.
ರಾಮಮಂದಿರದ ಉದ್ಘಾಟನೆಯ ಬಳಿಕದ ಮೊದಲ 100 ದಿನಗಳಲ್ಲಿ ಅಯೋಧ್ಯೆಗೆ ದೇಶದ ವಿವಿಧ ಭಾಗಗಳಿಂದ 1,000 ರೈಲುಗಳ ಸಂಚಾರ ನಡೆಸಲಾಗುವುದು ಎಂದು ರೈಲ್ವೆ ಇಲಾಖೆಯು ಘೋಷಿಸಿತ್ತು.