ಸಿಲಿಗುರಿ: ಜ. 26, 27ರಂದು ವಿಶ್ರಾಂತಿಯಲ್ಲಿದ್ದ ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಯು, ಇಂದು ಪುನರಾರಂಭವಾಗಿದ್ದು, ಪಶ್ಚಿಮ ಬಂಗಾಳ ತಲುಪಿದೆ.
ಸಿಲಿಗುರಿ: ಜ. 26, 27ರಂದು ವಿಶ್ರಾಂತಿಯಲ್ಲಿದ್ದ ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಯು, ಇಂದು ಪುನರಾರಂಭವಾಗಿದ್ದು, ಪಶ್ಚಿಮ ಬಂಗಾಳ ತಲುಪಿದೆ.
ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ರಾಜ್ಯದ ಉತ್ತರ ಭಾಗದಲ್ಲಿರುವ ಸಿಲಿಗುರಿಯ ಬಾಗ್ದೋಗ್ರಾ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಂಡರು.
ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ನಾಯಕರು ಸಿಲಿಗುರಿಯಿಂದ ಜಲಪಾಈಗುಡೀ ಜಿಲ್ಲೆಗೆ ಪ್ರಯಾಣಿಸಿ, ಅಲ್ಲಿಂದ ಯಾತ್ರೆ ಪುನರಾರಂಭ ಮಾಡಲಿದ್ದಾರೆ.
ಬಸ್ ಮತ್ತು ಕಾಲ್ನಡಿಗೆಯಲ್ಲಿ ಸಾಗುವ ಯಾತ್ರೆಯು ಸಿಲಿಗುರಿಯ ಬಳಿ ರಾತ್ರಿ ತಂಗಲಿದೆ. ಸೋಮವಾರ ಯಾತ್ರೆ ಬಿಹಾರಕ್ಕೆ ತೆರಳಲಿದೆ. ಮತ್ತೆ ಜ. 31ಕ್ಕೆ ಮಾಲ್ಡಾ ಮೂಲಕ ಪಶ್ಚಿಮ ಬಂಗಾಳ ಮರುಪ್ರವೇಶಿಸಿ ಫೆಬ್ರವರಿ 1 ರಂದು ರಾಜ್ಯದಿಂದ (ಪಶ್ಚಿಮ ಬಂಗಾಳ) ಹೊರಡಲಿದೆ.