ಮಂಜೇಶ್ವರ: ಕೇರಳ ಪೆನ್ಶನರ್ಸ್ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ ಡಿ. 30 ರಂದು ಹೊಸಂಗಡಿ ಸಮೀಪದ ವಾಮಂಜೂರು ಶ್ರೀ ಗುರು ನರಸಿಂಹ ಸಭಾಭವನದಲ್ಲಿ ನಡಯಿತು. ಜಿಲ್ಲಾಧ್ಯಕ ಮುತ್ತುಕೃಷ್ಣನ್ ಕೆ ಅಧ್ಯಕ್ಷತೆ ವಹಿಸಿದ್ದರು. ಕುಟುಂಬ ಪ್ರಭೋದನ್ ನ ದಕ್ಷಿಣ ಕರ್ನಾಟಕ ಸಂಚಾಲಕ ಸುಬ್ರಾಯ ನಂದೋಡಿ ಅತಿಥಿಗಳಾಗಿ ಭಾಗವಹಿಸಿದ್ದರು. ಕೇರಳ ಪೆನ್ಶನರ್ಸ್ ಸಂಘದ ರಾಜ್ಯ ಖಜಾಂಜಿ ನ್ಯಾಯವಾದಿ. ಜಯಭಾನು ಸಮ್ಮೇಳನವನ್ನು ಉದ್ಘಾಟಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ., ಬಿ.ಎಂ.ಎಸ್. ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ ಬಿ.ಎಂ., ಅಧ್ಯಾಪಕ ಪರಿಷತ್ತು ರಾಜ್ಯ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ, ಕೇರಳ ಪೆನ್ಶನರ್ಸ್ ಸಂಘದ ರಾಜ್ಯ ಉಪಾಧ್ಯಕ್ಷ ಈಶ್ವರ ರಾವ್ ಮೊದಲಾದವರು ಶುಭಶಂಸನೆಗೈದರು. ಜಿಲ್ಲಾ ಕಾರ್ಯದರ್ಶಿ ನಾಗರಾಜ ಬಾಳಿಕೆ ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯದರ್ಶಿ ಬಾಬು ನೀಲೇಶ್ವರ ವಂದಿಸಿದರು.
ಬಳಿಕ ಪ್ರತಿನಿಧಿ ಸಮ್ಮೇಳನ, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮುತ್ತುಕೃಷ್ಣನ್ ಅಧ್ಯಕ್ಷರಾಗಿಯೂ ಶ್ರೀಧರ ರಾವ್ ಯಮ್,ಬಾಬು ಯಮ್,ಶಾಂತ ಕುಮಾರಿಮತ್ತು ಕೇಶವ ಭಟ್ ಮನ್ನಿಪ್ಪಾಡಿ ಮುಂತಾದವರು ಉಪಾಧ್ಯಕ್ಷರಾಗಿ, ನಾಗರಾಜ ಬಾಳಿಕೆ ಕಾರ್ಯದರ್ಶಿಯಾಗಿ, ಸತ್ಯನಾರಾಯಣ ತಂತ್ರಿ ಜೊತೆ ಕಾರ್ಯದರ್ಶಿ, ಕೇಶವ. ಪ್ರಸಾದ್ ಕೆ ಖಜಾಂಚಿಯಾಗಿ ಆಯ್ಕೆಯಾದರು.