ಪೆರ್ಲ: ಕಾಮ್ರೆಡ್ ಭಾಸ್ಕರ ಕುಂಬಳೆ ಗ್ರಾಮೀಣ ಗ್ರಂಥಾಲಯದ ಕಾಟುಕುಕ್ಕೆ ಇದರ ವತಿಯಿಂದ 75ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು.
ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿಜಿ ಮ್ಯಾಥ್ಯೂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲೈಬ್ರರಿ ಅಧ್ಯಕ್ಷ ಶ್ರೀಧರ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಹಿರಿಯ ಉಪಸಂಪಾದಕ ಎಸ್. ನಿತ್ಯಾನಂದ ಪಡ್ರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ಉದಯ ಸಾರಂಗ್, ಎಣ್ಮಕಜೆ ಪಂಚಾಯತಿ ಸದಸ್ಯ ಶಶಿಧರ ಪಿ ಉಪಸ್ಥಿತರಿದ್ದರು.ಲೈಬ್ರರಿ ಕಾರ್ಯದರ್ಶಿ ಹೇಮಂತ್ ಸ್ವಾಗತಿಸಿ ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ ಪಿ ಕೆ ವಂದಿಸಿದರು.