HEALTH TIPS

ಮಂಗಲ್ಪಾಡಿ ಗ್ರಾಮ ಪಂಚಾಯತ್‍ನಲ್ಲಿ ಅವ್ಯವಹಾರ : ಬಿಜೆಪಿಯಿಂದ ಧರಣಿ ಸತ್ಯಾಗ್ರಹ

              ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿರುವ ಅವ್ಯವಹಾರದ ವಿರುದ್ಧ  ಬಿಜೆಪಿ ಮಂಗಲ್ಪಾಡಿ ಪಂಚಾಯತಿ ಸಮಿತಿಯ ಆಶ್ರಯದಲ್ಲಿ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಯಿತು. 

               ಪರಿಶಿಷ್ಟ ಜಾತಿ ವಿಭಾಗದವರಿಗೆ ಕಲಿಕಾ ಭಾಗವಾಗಿ ಗ್ರಾಮ ಪಂಚಾಯತಿಯಿಂದ ನೀಡಲ್ಪಟ್ಟ ಕಂಪ್ಯೂಟರ್, ಲ್ಯಾಪ್‍ಟಾಪ್ ಇತ್ಯಾದಿಗಳನ್ನು ಅರ್ಹ ಅರ್ಜಿದಾರರಿಗೆ ಒದಗಿಸದೆ ಅವರ ನಕಲಿ ಸಹಿಯೊಂದಿಗೆ ಖರೀದಿಸಿ ಮೋಸಗೊಳಿಸಿದ ಅವ್ಯವಹಾರದ ವಿರುದ್ಧ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನು ಬಿಜೆಪಿ ಕೇರಳ ರಾಜ್ಯ ಕೌನ್ಸಿಲ್ ಸದಸ್ಯ ವಿ.ರವೀಂದ್ರನ್ ಕುಂಬಳೆ ಉದ್ಘಾಟಿಸಿ ಮಾತನಾಡಿದರು. 

              ಬಿಜೆಪಿ ಮಂಗಲ್ಪಾಡಿ ಪಂಚಾಯತಿ ಸಮಿತಿಯ ಉಪಾಧ್ಯಕ್ಷ ಸುರೇಶ್ ಮುಟ್ಟಂ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕುಮಾರ್ ರೈ, ಜಿಲ್ಲಾ ಕಾರ್ಯದರ್ಶಿ ಮನುಲಾಲ್ ಮೇಲತ್, ಕುಂಬಳೆ ಮಂಡಲಾಧ್ಯಕ್ಷ ಸುನೀಲ್ ಅನಂತಪುರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತಕುಮಾರ್ ಮಯ್ಯ, ಅನಿಲ್‍ಕುಮಾರ್ ಕೆ.ಪಿ., ಗ್ರಾಮ ಪಂಚಾಯತಿ ಸದಸ್ಯೆಯರಾದ ಸುಧಾ ಗಣೇಶ್, ರೇವತಿ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಪಂಚಾಯತಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಿಶೋರ್‍ಕುಮಾರ್ ಬಂದ್ಯೋಡು ಸ್ವಾಗತಿಸಿ, ಸಮಿತಿಯ ಕಾರ್ಯದರ್ಶಿ ಪ್ರವೀಣ್ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries