ಮಧೂರು: ಇಲ್ಲಿಗೆ ಸಮೀಪದ ಉಳಿಯ ಧನ್ವಂತರಿ ಮಹಾವಿಷ್ಣು ಕ್ಷೇತ್ರ ಪರಿಸರದಲ್ಲಿ ವರ್ಷಂಪ್ರತಿ ನಡೆಯುವ ‘ಬಯಲುಕೋಲ ಮಹೋತ್ಸವ’ ಬ್ರಹ್ಮಶ್ರೀ ಉಳಿಯುತ್ತಾಯ ವಿಷ್ಣು ಅಸ್ರರ ನೇತೃತ್ವದಲ್ಲಿ ವಿವಿಧ ದೈವಿಕ ಕಾರ್ಯಕ್ರಮಗಳೊಂದಿಗೆ ಜನವರಿ 19ರಂದು ಜರುಗಲಿರುವುದು.
ಇದರ ಅಂಗವಾಗಿ ಸಂಜೆ 6ಕ್ಕೆ ಪ್ರಾರ್ಥನೆಯೊಂದಿಗೆ ಭಂಡಾರ ಉಳಿಯ ಕ್ಷೇತ್ರದಿಂದ ಹೊರಡುವುದು. ಕಾರ್ತಿಕ ಪೂಜೆಯ ನಂತರ ತೊಡಂಗಲ್, ಕುಳಿಚ್ಚಾಟಂ ಮತ್ತು ವಿಷ್ಣುಮೂರ್ತಿ ದೈವದ ನೃತ್ಯಗಳು,ಪ್ರಸಾದ ವಿತರಣೆ, ಭಂಡಾರ ಶ್ರೀ ಕ್ಷೇತ್ರ ಹಿಂತಿರುಗುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಳ್ಳಲಿರುವುದು.
ಅಂದು ರಾತ್ರಿ ಅನ್ನದಾನ ಸೇವೆ ಇರುವುದು.ಎಲ್ಲಾ ಭಗವತ್ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಲು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ವಿನಂತಿಸಿದೆ.