ಪೆರ್ಲ: ತ್ಯಾಜ್ಯಗಳನ್ನು ಎಸೆಯುವ ಪೆರ್ಲ ಪೇಟೆಯ ಬಸ್ ನಿಲ್ದಾಣದ ಸಮೀಪ ಸ್ಥಳವೊಂದನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಹಾಗೂ ಕಾಸರಗೋಡು ಜಿಲ್ಲಾ ಸುಚಿತ್ವ ಮಿಷನ್ ಸಹಕಾರದಲ್ಲಿ ಪೆರ್ಲದ ನಾಲಂದ ಕಾಲೇಜು ಎನ್ನೆಸ್ಸಸ್ ಘಟಕವು "ಸ್ನೇಹರಾಮ" ಎಂಬ ಮಿನಿ ಉದ್ಯಾನವನ್ನಾಗಿಸುವ ಮೂಲಕ ಗಮನ ಸೆಳೆದಿದೆ. ಇದರ ಉದ್ಘಾಟನೆಯನ್ನು ಎಣ್ಮಕಜೆ ಗ್ರಾಮ ಪಂಚಾಯತಿ, ಕಾಸರಗೋಡು ಜಿಲ್ಲಾ ಸುಚಿತ್ವ ಮಿಷನ್ ಮತ್ತು 40 ಮೇಲ್ಪಟ್ಟ ಕ್ರಿಕೆಟರ್ಸ್ ಕ್ಲಬ್ ಎಣ್ಮಕಜೆ ಇವರ ಸಹಯೋಗದೊಂದಿಗೆ ನಡೆಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ ಎಸ್ ಗಾಂಭೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಂ. ಯೋಜನಾ ಸಮಿತಿ ಉಪಾಧ್ಯಕ್ಷೆ. ಆಯಿμÁ ಎ, ಜಿಲ್ಲಾ ಶುಚಿತ್ವ ಮಿಷನ್ ಸಂಪನ್ಮೂಲ ವ್ಯಕ್ತಿ ಸುಗಂಧಿ, ಕಾಲೇಜು ಪ್ರಾಂಶುಪಾಲ ಶಂಕರ ಕೆ ಹಾಗೂ ಅಬೌವ್ ಪೋರ್ಟಿ ಕ್ರಿಕೆಟರ್ಸ್ ಕ್ಲಬ್ ನ ರಾಮಕೃಷ್ಣ ರೈ ಕುದ್ವ, ಬಾಲಕೃಷ್ಣ ಮಾಸ್ತರ್, ಕಮಲಾಕ್ಷ ಕಾನ, ಪದ್ಮ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಕಾವ್ಯಚಂದ್ರನ್ ಸ್ವಾಗತಿಸಿ ಎನ್ ಎಸ್ ಎಸ್ ಕಾರ್ಯದರ್ಶಿ ಹರ್ಷಿತಾ ವಂದಿಸಿದರು. ಎನ್ನೆಸ್ಸಸ್ ಸ್ವಯಂಸೇವಕರು, ಕ್ಲಬ್ ಸದಸ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.