HEALTH TIPS

ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ವಿಗ್ರಹಗಳ ಭಾಗಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ ಆಡಳಿತ ಸಮಿತಿ

                 ವಾರಣಾಸಿ: ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್‌ಐ)ಇಲಾಖೆಯು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿಯ ಅವಶೇಷಗಳ ರಾಶಿಯಲ್ಲಿ ಪತ್ತೆ ಹಚ್ಚಿರುವ ವಿಗ್ರಹಗಳ ಭಾಗಗಳನ್ನು ಕಟ್ಟಡವನ್ನು ಕೆಡವುವ ಮುನ್ನ ಅದರಲ್ಲಿ ಬಾಡಿಗೆಗೆ ಅಂಗಡಿಗಳನ್ನು ನಡೆಸುತ್ತಿದ್ದ ಶಿಲ್ಪಿಗಳು ಎಸೆದಿದ್ದಿರಬಹುದು ಎಂದು ಮಸೀದಿಯ ಆಡಳಿತವನ್ನು ನೋಡಿಕೊಳ್ಳುತ್ತಿರುವ ಅಂಜುಮನ್ ಇಂತಿಜಾಮಿಯಾ ಮಸಜಿದ್ (ಎಐಎಂ) ಹೇಳಿದೆ.

               ಎಐಎಂ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿರುವ ಹಿಂದು ವಾದಿಗಳ ಪರ ವಕೀಲ ವಿಷ್ಣುಶಂಕರ ಜೈನ್ ಅವರು, ಇಂತಹ ವಾದಕ್ಕೆ ಯಾವುದೇ ಆಧಾರವಿಲ್ಲ. ಜ್ಞಾನವಾಪಿ ಕುರಿತು ಎಎಸ್‌ಐ ಸಮೀಕ್ಷಾ ವರದಿಯು, ಸಂಕೀರ್ಣದೊಳಗಿನ ಅವಶೇಷಗಳ ರಾಶಿಯಲ್ಲಿ ಪತ್ತೆಯಾದ ಪ್ರತಿ ವಿಗ್ರಹ ಮತ್ತು ಕಲಾಕೃತಿಯ ವಯಸ್ಸು, ಯುಗ, ವ್ಯಾಸ ಮತ್ತು ಇತರ ಎಲ್ಲ ಸಂಬಂಧಿತ ವಿವರಗಳನ್ನು ನಿರ್ದಿಷ್ಟವಾಗಿ ತಿಳಿಸಿದೆ ಎಂದು ಹೇಳಿದ್ದಾರೆ.

                ಗುರುವಾರ ಎಎಸ್‌ಐ ವರದಿಯ ಪ್ರತಿಗಳನ್ನು ಹಿಂದು ಮತ್ತು ಮುಸ್ಲಿಮ್ ಕಕ್ಷಿಗಳಿಗೆ ನೀಡಲಾಗಿತ್ತು. 17ನೇ ಶತಮಾನದಲ್ಲಿ ಜ್ಞಾನವಾಪಿ ಮಸೀದಿ ನಿರ್ಮಾಣಗೊಳ್ಳುವ ಮುನ್ನ ಆ ಸ್ಥಳದಲ್ಲಿ ಹಿಂದು ದೇವಸ್ಥಾನವಿತ್ತು ಎಂಬ ಅಭಿಪ್ರಾಯವನ್ನು ವರದಿಯಲ್ಲಿ ವ್ಯಕ್ತಪಡಿಸಲಾಗಿದೆ.

             ಎಎಸ್‌ಐ ವರದಿಯ ಅಧ್ಯಯನಕ್ಕಾಗಿ ಕಾನೂನು ತಜ್ಞರನ್ನು ನಿಯೋಜಿಸುವುದಾಗಿ ಎಐಎಂ ಹೇಳಿದೆ. ಮಸೀದಿಯಿರುವ ಸ್ಥಳದಲ್ಲಿ ದೇವಸ್ಥಾನವಿತ್ತು ಎಂಬ ಹಿಂದು ಕಕ್ಷಿದಾರರ ಹೇಳಿಕೆಯು ಯಾವುದೇ ನೂತನ ಸಂಶೋಧನೆಯನ್ನು ಆಧರಿಸಿಲ್ಲ ಎಂದು ಹೇಳಿದ ಎಐಎಂ ಪರ ವಕೀಲ ಅಖ್ಲಾಕ್ ಅಹ್ಮದ್ ಅವರು, 'ನಾವಿನ್ನೂ ವಿವರಗಳನ್ನು ಓದಿಲ್ಲ, ಆದರೆ ಸಮೀಕ್ಷೆಯ ಸಂದರ್ಭದಲ್ಲಿ ಅವಶೇಷಗಳಲ್ಲಿ ಪತ್ತೆಯಾಗಿರುವ ವಿಗ್ರಹಗಳಿಗೆ ಸಂಬಂಧಿಸಿದಂತೆ ಹಿಂದು ವಾದಿಗಳ ಹೇಳಿಕೆಯಲ್ಲಿ ಹೊಸದೇನೂ ಇಲ್ಲವೆಂಬಂತೆ ಕಂಡು ಬರುತ್ತಿದೆ. ವರದಿಯನ್ನು ಅಧ್ಯಯನ ಮಾಡಿದ ಬಳಿಕ ನಾವು ಪ್ರತಿಕ್ರಿಯಿಸುತ್ತೇವೆ. ಸದ್ಯಕ್ಕೆ ಈ ಹೇಳಿಕೆಗಳಿಗೂ ಮೇ 2022ರಲ್ಲಿ ನ್ಯಾಯಾಲಯ ಆಯಕ್ತರ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಿದ್ದ ಹೇಳಿಕೆಗಳಿಗೂ ಯಾವುದೇ ವ್ಯತ್ಯಾಸವಿಲ್ಲ' ಎಂದರು.

                 ಛತ್‌ದ್ವಾರದಲ್ಲಿ ಎಐಎಂನಿಂದ ಅಂಗಡಿಗಳನ್ನು ಬಾಡಿಗೆಗೆ ಪಡೆದಿದ್ದ ಐದಾರು ಶಿಲ್ಪಿಗಳು 1993ರಲ್ಲಿ ಮಸೀದಿಯ ದಕ್ಷಿಣ ಭಾಗಕ್ಕೆ ಗ್ರಿಲ್‌ಗಳನ್ನು ಅಳವಡಿಸುವವರೆಗೂ ಅಲ್ಲಿ ಹಾನಿಗೀಡಾದ ವಿಗ್ರಹಗಳು ಮತ್ತು ತ್ಯಾಜ್ಯಗಳನ್ನು ಎಸೆದಿರುವ ಬಲವಾದ ಸಾಧ್ಯತೆಯಿದೆ. ಎಎಸ್‌ಐ ತಂಡವು ತನ್ನ ಸಮೀಕ್ಷೆ ಸಂದರ್ಭದಲ್ಲಿ ಅವುಗಳನ್ನೇ ವಶಪಡಿಸಿಕೊಂಡಿರಬಹುದು ಎಂದು ಅಹ್ಮದ್ ತಿಳಿಸಿದರು.

ಕಳೆದ ವರ್ಷದ ಜು.21ರಂದು ಶೃಂಗಾರ ಗೌರಿ ಪ್ರಕರಣದ ವಿಚಾರಣೆ ಸಂದರ್ಭ ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿದ್ದರು. ಮುಸ್ಲಿಮ್ ಕಕ್ಷಿಗಳ ಹೇಳಿಕೆಗೆ ಪ್ರತಿಕ್ರಿಯಿಸಲು ಎಎಸ್‌ಐ ಅಧಿಕಾರಿಗಳು ನಿರಾಕರಿಸಿದ್ದಾರೆ.

                  ಮಸೀದಿಯ ವಿಸ್ತಾರವನ್ನು ಹೆಚ್ಚಿಸಲು ಮತ್ತು 'ಸಹನ್ 'ನಿರ್ಮಿಸಲು ಸ್ತಂಭಗಳು ಮತ್ತು ಗೋಡೆಗೆ ಅಳವಡಿಸಿದ್ದ ಚೌಕಸ್ತಂಭಗಳು ಸೇರಿದಂತೆ ಸ್ಥಳದಲ್ಲಿ ಮೊದಲು ಅಸ್ತಿತ್ವದಲ್ಲಿದ್ದ ದೇವಸ್ಥಾನದ ಭಾಗಗಳನ್ನು ಮಾರ್ಪಾಡಿನೊಂದಿಗೆ ಮರು ಬಳಸಲಾಗಿತ್ತು ಎಂದು ಎಎಸ್‌ಐ ತನ್ನ ವರದಿಯಲ್ಲಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries