ಕಾಸರಗೋಡು: ಮಾದಕದ್ರವ್ಯ ವ್ಯಸನದ ವಿರುದ್ಧವಾಗಿ ಹೊಸದುರ್ಗ ಜಿಲ್ಲಾ ಕಾರಾಗೃಹ, ವಿಮುಕ್ತಿ ಕಾಸರಗೋಡು, ಜಿಲ್ಲಾ ಕಾರಾಗೃಹ, ನವಕೇರಳ ಮಿಷನ್ ಕಾಸರಗೋಡು ಮತ್ತು ರೋಟರಿ ಕಾಞಂಗಾಡ್ ಸಹಕಾರದೊಂದಿಗೆ ಜಿಲ್ಲಾ ಕಾರಾಗೃಹದಲ್ಲಿ 2024ನೇ ವರ್ಷವನ್ನು ದೀಪಜ್ವಾಲೆಯೊಂದಿಗೆ ಬರಮಾಡಿಕೊಳ್ಳಲಾಯಿತು.
ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಕೆ. ವೇಣು ಅಧ್ಯಕ್ಷತೆ ವಹಿಸಿದ್ದರು. ನವ ಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್, ರೋಟರಿ ಕಾಞಂಗಾಡ್ ಅಧ್ಯಕ್ಷ ಎಂ.ವಿನೋದ್, ಅಕ್ಷಯ್ ಕಮ್ಮತ್, ಎನ್.ಸುರೇಶ್, ಎಂ.ಸಿ. ಆನಂದ್, ಎನ್ ಎಸ್ ಎಸ್ ಸಂಯೋಜಕ ಕೆ.ಯು. ಜಗದೀಶ್, ಸಿತಾರಾ ರಾಘವನ್, ಅಬಕಾರಿ ತಡೆ ಅಧಿಕಾರಿ ಎಂ. ರಾಜೀವನ್, ಉಪ ಕಾರಾಗೃಹ ಅಧಿಕಾರಿ ಪ್ರಮೋದ್, ಎಂ. ವಿ. ಸಂತೋಷ್ ಕುಮಾರ್, ಸಹಾಯಕ ಜೈಲು ಅಧಿಕಾರಿ ವಿ. ವಿನೀತ್ ಪಿಳ್ಳೈ, ಪಿ.ಜೆ. ಬೈಜು, ವಿವೇಕ್ ಮತ್ತು ಅಜೀಶ್ ಭಾಗವಹಿಸಿದ್ದರು. ಮಹಿಳಾ ಸಹಾಯಕ. ಅಧೀಕ್ಷಕ ಟಿ. ವಿ.ಸುಮಾ ವಮದಿಸಿದರು.