ಕಾಸರಗೋಡು: ಮತದಾನ ಹಕ್ಕು ಚಲಾವಣೆಯ ಮಹತ್ವವನ್ನು ಜನರಿಗೆ ತಿಳಿಸಲು ಹಾಗೂ ಮತದಾನದ ಕುರಿತು ಜನರಲ್ಲಿರುವ ಅನುಮಾನಗಳನ್ನು ನಿವಾರಿಸಲು ಸ್ವೀಪ್ ಮತ್ತು ಜಿಲ್ಲಾ ಚುನಾವಣಾ ಇಲಾಖೆ ನಡೆಸುತ್ತಿರುವ ವೋಟ್ ವ್ಯಾನ್ ಪ್ರವಾಸ ಜಿಲ್ಲೆಯಲ್ಲಿ ಮುಂದುವರಿದಿದೆ. ಪ್ರಮುಖ ಕೇಂದ್ರಗಳಾದ ಕುತ್ತಿಕೋಲ್ ಬಂದಡ್ಕ, ಮುನ್ನಾಡ್, ಬೇಡಡ್ಕ್ಕ ಮತ್ತು ಕುಂಡಂಗುಳಿ ಮೂಲಕ ಪರ್ಯಟನೆ ಪೂರ್ಣಗೊಂಡಿತು. ಕುತ್ತಿಕೋಲ್ ಐಟಿಐನಲ್ಲಿ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ಎ.ಧನಂಜಯನ್ ಜಾಗೃತಿ ತರಗತಿ ನಡೆಸಿದರು. . ಕೆ.ಮುಕುಂದನ್ ಮತ್ತು ಕೆ.ಟಿ.ಧನೇಶ್ ಶುಭಹಾರೈಸಿದರು. ಶಿಕ್ಷಕರಾದ ಎಸ್.ಸಿಬಿನ್ ಸ್ವಾಗತಿಸಿ, ಪಿ.ಆರ್.ರಾಜೇಶ್ ವಂದಿಸಿದರುನಂತರ ವಿದ್ಯುನ್ಮಾನ ಮತಯಂತ್ರವನ್ನು ಮಕ್ಕಳಿಗೆ ಪರಿಚಯಿಸಲಾಯಿತು.