ಕಾಸರಗೋಡು: ಸಾಮಾಜಿಕ ನ್ಯಾಯ ಇಲಾಖೆಯ 'ತಡೆ ರಹಿತ ಕೇರಳ'ಯೋಜನೆಯ ಅಂಗವಾಗಿ ವಿದ್ಯಾನಗರ ಸಿವಿಲ್ ಸ್ಟೇಶನ್‍ನಲ್ಲಿ ನಿರ್ಮಿಸಿರುವ ಲಿಫ್ಟ್ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದ್ಘಾಟಿಸಿದರು. ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಸೇವೆಗೆ ಬರುವ ವಿಕಲಚೇತನರಿಗೆ ಅಡೆತಡೆಗಳಿಲ್ಲದೆ ಸೌಲಭ್ಯಗಳನ್ನು ಒದಗಿಸುವುದು ತಡೆರಹಿತ ಕೇರಳ ಯೋಜನೆಯ ಉದ್ದೇಶವಾಗಿದೆ. 63 ಲಕ್ಷ ರೂ. ವೆಚ್ಚದಲ್ಲಿ ಲಿಫ್ಟ್ ನಿರ್ಮಾಣ ಯೋಜನೆ ಜಾರಿಗೊಳಿಸಲಾಗಿದೆ.
ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ. ಕೈನಿಕರ, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಕೆ.ನವೀನ್ ಬಾಬು, ಎಚ್. ಎಸ್.ಆರ್.ರಾಜೇಶ್, ಸಾಮಾಜಿಕ ನ್ಯಾಯ ವಿಭಾಗ ಜಿಲ್ಲಾ ಅಧಿಕಾರಿ ಆರ್ಯ ಪಿ. ರಾಜ್, ಎಡಿ ಸರ್ವೆ ಆಸಿಫ್ ಅಲಿಯಾರ್, ಸ್ಪೋಟ್ರ್ಸ್ ಕೌನ್ಸಿಲ್ ಪ್ರತಿನಿಧಿ ಪವಿತ್ರನ್ ಮಾಶ್, ಸಿವಿಲ್‍ಸ್ಟೇಶನ್ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.