ಕಾಸರಗೋಡು :ಸ್ಟೇಟ್ ರಿಸೋರ್ಸ್ ಸೆಂಟರ್ ನ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಸ್.ಆರ್.ಸಿ ಕಮ್ಯುನಿಟಿ ಕಾಲೇಜ್ ಜನವರಿ ಸೆಷನ್‌ನಲ್ಲಿ ನಡೆಸುವ ಸರ್ಟಿಫಿಕೇಟ್ ಇನ್ ಕೌನ್ಸೆಲಿಂಗ್ ಸೈಕಾಲಜಿ ಪ್ರೋಗ್ರಾಂಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸರ್ಟಿಫಿಕೇಟ್ ಕೋರ್ಸ್ ಕಾಲಾವಧಿ ಆರು ತಿಂಗಳು. 18 ವರ್ಷ ಮೇಲ್ಪಟ್ಟ ಯಾರಿಗೂ ಅರ್ಜಿ ಸಲ್ಲಿಸಬಹುದು. ಯಾವುದೇ ಗರಿಷ್ಠ ವಯಸ್ಸಿನ ಮಿತಿ ಇಲ್ಲ. ಶನಿವಾರ / ಭಾನುವಾರ / ಸಾರ್ವಜನಿಕ ರಜಾದಿನಗಳಲ್ಲಿ ಕಾಂಟಾಕ್ಟ್ ಕ್ಲಾಸ್ ನಡೆಸಲಾಗುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲಿರುವ ಲಿಂಕ್ https://app.srccc.in/register. ವೆಬ್‌ಸೈಟ್ www.srccc.in. ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ ಜನವರಿ 31. ಜಿಲ್ಲೆಯ ಅಧ್ಯಯನ ಕೇಂದ್ರ ಚೇತನ ಯೋಗ ಸೆಂಟರ್ ಫೋನ್ ನಂಬರ್ 9495654737, 8129119129.