ಉಪ್ಪಳ: ಒಂಬತ್ತು ನದಿಗಳು, 3 ಕಿರು ನದಿಗಳು ಸೇರಿದಂತೆ ನೂರಾರು ಸಣ್ಣ ತೊರೆಗಳು ಮತ್ತು ಉಪನದಿಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಮಳೆಗಾಲ ಮುಗಿದ ಕೆಲವೇ ದಿನಗಳಲ್ಲಿ ನೀರಿನ ಕೊರತೆಯಿರುವ ಪರಿಸ್ಥಿತಿಯಲ್ಲಿ ಹೊಸ ಜಲಸಂರಕ್ಷಣಾ ಕಟ್ಟಗಳ ನಿರ್ಮಾಣ ಮತ್ತು ಈಗಿರುವ ನೀರಿನ ನವೀಕರಣ ಜಿಲ್ಲೆಯ ಒಟ್ಟಾರೆ ನೀರಿನ ಸಂರಕ್ಷಣೆಗೆ ಸಂರಕ್ಷಣಾ ರಚನೆಗಳು ತುಂಬಾ ಪ್ರಯೋಜನಕಾರಿಯಾಗುತ್ತವೆ. ಇದಕ್ಕಾಗಿ 5.26 ಕೋಟಿ ರೂ.ವ್ಯಯಿಸಲು ಜಿಲ್ಲಾ ಅಭಿವೃದ್ದಿ ಸಮಿತಿ ಸಭೆಯಲ್ಲಿ ಅನುಮತಿಸಲಾಗಿದೆ.
ಮಂಗಲ್ಪಾಡಿ ಗ್ರಾ.ಪಂ.ನ ಮಡಂದೂರು-ಬೇಕೂರು ಗ್ರಾಮದಲ್ಲಿ ಉಪ್ಪಳ ನದಿಗೆ ಅಡ್ಡಲಾಗಿ ವಿಸಿಬಿ ಕಮ್ ಬ್ರಿಡ್ಜ್ ನಿರ್ಮಾಣದ ತನಿಖಾ ಕಾಮಗಾರಿ, ಕುಂಬ್ಡಾಜೆ ಗ್ರಾ.ಪಂ.ನ ಮಣ್ಣಾಪಿನಲ್ಲಿ ವಿ.ಸಿ.ಬಿ ಕಮ್ ಟ್ರಾಕ್ಟರ್ ವೇ ಪುನರ್ ನಿರ್ಮಾಣ, ಪುತ್ತಿಗೆ ಗ್ರಾ.ಪಂ.ಸಾರಡಿಯಲ್ಲಿ ವಿ.ಸಿ.ಬಿ ಕಮ್ ಬ್ರಿಡ್ಜ್ ನಿರ್ಮಾಣ, ಎಣ್ಮಕಜೆ ಗ್ರಾ.ಪಂ. ಕೊಲ್ಲಮಜುಲುವಿನಲ್ಲಿ ಸ್ವರ್ಗ ನದಿಗೆ ಅಡ್ಡಲಾಗಿ ವಿಸಿಬಿ ಕಮ್ ಟ್ರಾಕ್ಟರ್ ಮಾರ್ಗ, ಮಜಕ್ಕಾರು ವಿಸಿಬಿ ಕಮ್ ಟ್ರ್ಯಾಕ್ಟರ್ ವೇ ನಿರ್ಮಾಣ, ಮುಳಿಯಾರ್ ಗ್ರಾಮ ಪಂಚಾಯತಿಯ ಕಾಳಿಪಳ್ಳ ಬಳಿ ಕೊಡವಂಜಿ ಸೇತುವೆ ಬಳಿ ವಿಸಿಬಿ ನಿರ್ಮಾಣ, ಮೀಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಜ್ಜ ಪೊಯ್ಯ ಎಂಬಲ್ಲಿ ಪೊಯ್ಯ ಹೊಳೆಗೆ ವಿಸಿಬಿ, ಪೈವಳಿಕೆ ಗ್ರಾ.ಪಂ.ವ್ಯಾಪ್ತಿಯ ಕಯ್ಯಾರು ಜನಾರ್ದನ ದೇವಸ್ಥಾನದ ಬಳಿ ಸ್ವರ್ಣಗಿರಿ ಹೊಳೆಗೆ ಅಡ್ಡಲಾಗಿ ವಿಸಿಬಿ ಕಮ್ ಸೇತುವೆ ನವೀಕರಣಗಳಿಗೆ ಯೋಜನಾ ಮೊತ್ತ ಅನುಮತಿಸಲಾಗಿದೆ.
ಮಂಜೇಶ್ವರ ಗ್ರಾಮ ಪಂಚಾಯತಿಯ ಕಣ್ವತೀರ್ಥ ಬೀಚ್ ರಸ್ತೆಯ ನವೀಕರಣಕ್ಕಾಗಿ ಸೇರಿದಂತೆ ವಿವಿಧ ಯೋಜನೆಗೆ 2 ಕೋಟಿ 37 ಲಕ್ಷ ರೂ. ಅನುಮತಿಸಲಾಗಿದ್ದು, ಪ್ರವಾಸೋದ್ಯಮ ಪ್ರಾಮುಖ್ಯತೆಯನ್ನು ಹೊಂದಿರುವ ಕಣ್ವತೀರ್ಥ ಬೀಚ್‍ಗೆ ತೆರಳುವ ರಸ್ತೆಯನ್ನು ಮೇಲ್ದರ್ಜೆಗೇರಿಸುವುದರಿಂದ ಪ್ರವಾಸೋದ್ಯಮ ಸಾಮಥ್ರ್ಯ ಹೆಚ್ಚಿಸುವ ಲಕ್ಷ್ಯವಿರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಮಾಹಿತಿಯಲ್ಲಿ ತಿಳಿಸಲಾಗಿದೆ.