ಬದಿಯಡ್ಕ: ಕಾಸರಗೋಡು ಕೃಷಿಕರ ಮಾರುಕಟ್ಟೆ ಸಹಕಾರಿ ಸಂಘ ನೀರ್ಚಾಲು ಇದರ 2023-2028 ವರ್ಷದ ಅವಗೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಹಕಾರ ಭಾರತಿಯ ಎಲ್ಲಾ 11 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಕೃಷಿಕ ಪದ್ಮರಾಜ ಪಟ್ಟಾಜೆ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನಿವೃತ್ತ ಅಧ್ಯಾಪಕ ಗುಣಾಜೆ ಶಿವಶಂಕರ ಭಟ್ ಹಾಗೂ ನಿರ್ದೇಶಕರುಗಳಾಗಿ ಉದನೇಶ ವೀರ ಕಿಳಿಂಗಾರು, ಸೂರ್ಯಪ್ರಕಾಶ್ ಕೋಡಿಂಗಾರು, ರಾಮ ಬಿ. ಏಣಿಯರ್ಪು, ಕನಕವಲ್ಲಿ ಬಡಗಮೂಲೆ, ಭಾರ್ಗವಿ ನೀರ್ಚಾಲು, ರತ್ನಾವತಿ ಏಣಿಯರ್ಪು, ಸರ್ವೇಶ ಕುಮಾರ ಕುದ್ರೆಪ್ಪಾಡಿ, ಶಿವಕೃಷ್ಣ ಭಟ್ ಬಳಕ್ಕ, ಜನಾಧರ್Àನ ಕೆಡೆಂಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನೀರ್ಚಾಲು ಕೇಂದ್ರ ಕಚೇರಿಯಲ್ಲಿ ಜರಗಿದ ಅಭಿನಂದನಾ ಸಭೆಯಲ್ಲಿ ಸಹಕಾರ ಭಾರತಿಯ ಜಿಲ್ಲಾ ಅಧ್ಯಕ್ಷ ಗಣೇಶ ಪಾರೆಕಟ್ಟ, ಸಂಘಟನಾ ಕಾರ್ಯದರ್ಶಿ ಶಂಕರನಾರಾಯಣ ಕಿದೂರು, ತಾಲೂಕು ಕಾರ್ಯದರ್ಶಿ ಗಣಪತಿ ಪ್ರಸಾದ ಕುಳಮರ್ವ ಅಭಿನಂದಿಸಿದರು.