ಮಂಜೇಶ್ವರ : ಚೆರ್ಕಳ ಫೌಂಡೇಶನ್ ಆಶ್ರಯದಲ್ಲಿ ಮಾಜಿ ಸಚಿವ ದಿ. ಚೆರ್ಕಳಂ ಅಬ್ದುಲ್ಲ ಸಂಸ್ಮರಣಾ ಸಂಗಮ ಹಾಗೂ ಸಾಂಸ್ಕೃತಿಕ ಸಮ್ಮೇಳನ ನಡೆಯಿತು.
ಮಂಜೇಶ್ವರ ಯತೀಂಖಾನ ಆವರಣದಲ್ಲಿ ಗುರುವಾರ ಬೆಳಿಗ್ಗೆ ಯತೀಂಖಾನ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಉಪ್ಪಳ ಗೇಟ್ ಧ್ವಜಾರೋಹಣಗೈಯುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ನಡೆದ ಸಂಸ್ಮರಣಾ ಸಂಗಮವನ್ನು ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಸಾದಿಖ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು. ಈ ಸಂದರ್ಭ ಕರ್ನಾಟಕ ವಿಧಾನ ಸಭಾ ಸಭಾಪತಿ ಯು ಟಿ ಖಾದರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಈ ಸಂದರ್ಭ ಚೆರ್ಕಳ ಅಬ್ದುಲ್ಲ ಫೌಂಡೇಶನ್ ನ ವತಿಯಿಂದ ನೀಡಲಾಗುತ್ತಿರುವ ಪ್ರಿಸ್ಟೀಜಿಯಸ್ ಲೀಡರ್ಶಿಪ್ ಪ್ರಶಸ್ತಿಯನ್ನು ಮುಸ್ಲಿಂ ಲೀಗ್ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಕೆ ಎಂ ಖಾದರ್ ಮೊಯಿದ್ದೀನ್, ಕಲ್ಚರಲ್ ಫ್ರೈಡ್ ಪ್ರಶಸ್ತಿಯನ್ನು ಟಿ ಪದ್ಮನಾಭ ಅವರಿಗೆ ಹಾಗೂ ಬಿಸ್ನೆಸ್ ಹಾನೆಸ್ಟ್ ಪ್ರಶಸ್ತಿಯನ್ನು ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅವರಿಗೆ 50,000 ರೂ. ನಗದು ಹಾಗೂ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಮುಸ್ಲಿಂ ಲೀಗ್ ಹಿರಿಯ ಮುಖಂಡ ಎಂ.ಎಸ್.ಮೊಹಮ್ಮದ್ ಕುಂಞÂ್ಞ, ಚಿತ್ರಕಲಾವಿದ ಪಿ.ಎಸ್. ಪುಣಿಚಿತ್ತಾಯ ಹಾಗೂ ಹಿರಿಯ ಪತ್ರಕರ್ತ ಸೂಪಿ ವಾಣಿ ಮೇಲ್ ಅವರಿಗೂ ವೇದಿಕೆಯಲ್ಲಿ ವಿಶೇಷ ಗೌರವಗಳೊಂದಿಗೆ ಹತ್ತು ಸಾವಿರ ರೂ. ನಗದು ಮತ್ತು ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಯತೀಂಖಾನ ದಲ್ಲಿ ನೂತನವಾಗಿ ನಿರ್ಮಿಸಲಾದ ಕೊಠಡಿಯನ್ನು ಹಾಗೂ "ಚೆರ್ಕಳಂ ನೆನಪು" ಪುಸ್ತಕದ ವಿತರಣಾ ಉದ್ಘಾಟನೆಯನ್ನು ಕೂಡಾ ಸಾದಿಖ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೆರವೇರಿಸಿದರು. ಬಳಿಕ ನಡೆದ ಸಾಂಸ್ಕೃತಿಕ ಸಮ್ಮೇಳನವನ್ನು ಸಯ್ಯದ್ ಮುನವ್ವರ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಕರ್ನಾಟಕದ ಮಾಜಿ ಸಚಿವ ರಮಾನಾಥ್ ರೈ, ಶ್ರೀ ಪ್ರೇಮಾನಂದ ಸ್ವಾಮೀಜಿ, ಅಬ್ದುಲ್ ಮಜೀದ್ ಕೆ ಎ, ಎಂ ಸಿ ಖಮರುದ್ದೀನ್, ಯು ಕೆ ಸೈಪುÅಲ್ಲಾ ತಂಙಳ್ ಮೊಯಿದ್ದೀನ್ ಕುಂಞ (ಪ್ರಿಯ), ಹಾರಿಸ್ ಚೂರಿ, ನಾಸರ್ ಚೆರ್ಕಳಂ, ವಿ ವೇಣುಗೋಪಾಲ್, ತೌಸೀಫ್ ಪಿ ಬಿ, ನಫೀಸಾ ಶಿಝಾ, ಹಯಾತುಲ್ಲ ಕಾಮಿಲ್, ಎಂ ಪಿ ಶಾಫಿ, ರಝಾಕ್ ಕಲ್ಪಟ್ಟ, ಮುಜೀಬ್ ತಳಂಗರೆ, ಅಬ್ದುಲ್ಲ ಕುಂಞ ಚೆರ್ಕಳ, ಹಾಜಿ ಮೊಹಮ್ಮದ್ ಅಬ್ದುಲ್ ಖಾದರ್, ಪಿ ವಿ ಪ್ರಭಾಕರ ಸಹಿತ ಗಣ್ಯರು ಉಪಸ್ಥಿತರಿದ್ದರು. ನಾಸರ್ ಚೆರ್ಕಳಂ ಸ್ವಾಗತಿಸಿ ಮುಜೀಬ್ ತಳಂಗರ ವಂದಿಸಿದರು.