ಶ್ರೀನಗರ: ಅಯೋಧ್ಯೆಯಿಂದ ತಂದ 'ಕಳಶ'ವನ್ನು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪ್ರಸಿದ್ಧ ಸೂರ್ಯ ದೇವಾಲಯದ ಆವರಣದಲ್ಲಿರುವ ರಾಮ ಮಂದಿರದಲ್ಲಿ ಭಾನುವಾರ ಪ್ರತಿಷ್ಠಾಪಿಸಲಾಯಿತು.
ಶ್ರೀನಗರ: ಅಯೋಧ್ಯೆಯಿಂದ ತಂದ 'ಕಳಶ'ವನ್ನು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪ್ರಸಿದ್ಧ ಸೂರ್ಯ ದೇವಾಲಯದ ಆವರಣದಲ್ಲಿರುವ ರಾಮ ಮಂದಿರದಲ್ಲಿ ಭಾನುವಾರ ಪ್ರತಿಷ್ಠಾಪಿಸಲಾಯಿತು.
ಉತ್ತರ ಪ್ರದೇಶ ಮತ್ತು ತಮಿಳುನಾಡು ಭಕ್ತರ ಸಮ್ಮುಖದಲ್ಲಿ ಸ್ಥಳೀಯರು ಕಳಶವನ್ನು ಪ್ರತಿಷ್ಠಾಪಿಸಿದರು.
ಎಂಟನೇ ಶತಮಾನದ ಮಾರ್ತಾಂಡ ದೇಗುಲವು ಭಾರತದ ಅತಿ ಪುರಾತನ ಸೂರ್ಯ ದೇವಾಲಯಗಳಲ್ಲಿ ಒಂದು.
ದೆಹಲಿಯಾದ್ಯಂತ ದೇಗುಲಗಳಲ್ಲಿ ನೇರಪ್ರಸಾರ
: ಅಯೋಧ್ಯೆಯ ರಾಮ ಮಂದಿರದಲ್ಲಿ ಜ.22ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ರಾಷ್ಟ್ರ ರಾಜಧಾನಿಯಾದ್ಯಂತ ಸುಮಾರು 14 ಸಾವಿರ ದೇಗುಲಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಬಿಜೆಪಿಯ ದೆಹಲಿ ಮುಜರಾಯಿ ಘಟಕದ ಅಧ್ಯಕ್ಷ ಕರ್ನೆಲ್ ಸಿಂಗ್ ಭಾನುವಾರ ತಿಳಿಸಿದರು. ಪ್ರತಿ ದೇಗುಲದಲ್ಲಿ ಸುಮಾರು 200 ಮಂದಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಾರೆ. ಒಟ್ಟಾರೆ 30 ಲಕ್ಷ ಜನರು ದೇಗುಲಗಳಲ್ಲಿ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಣೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದರು. ಜ.20ರಂದು ಖಾಟು ಶ್ಯಾಮ್ ದೇಗುಲದಲ್ಲಿ 1.08 ಲಕ್ಷ ದೀಪಗಳನ್ನು ಬೆಳಗಲಾಗುತ್ತದೆ ಮತ್ತು ಜ.17ರಂದು ದೇಗುಲದ ಪುರೋಹಿತರು ಬೈಕ್‌ನಲ್ಲಿ ರ‍್ಯಾಲಿ ನಡೆಸಲಿದ್ದಾರೆ ಎಂದೂ ಮಾಹಿತಿ ನೀಡಿದರು.